7

ಕುಂಬಾರರನ್ನು ಎಸ್‌ಟಿಗೆ ಸೇರಿಸಲು ಒತ್ತಾಯ

Published:
Updated:

ಚಿಂತಾಮಣಿ: ‘ಇತರೆ ಸಮುದಾಯಗಳಿಗಿಂತ ಸಾಕಷ್ಟು ಹಿಂದುಳಿದಿರುವ ಕುಂಬಾರ ಸಮುದಾಯವನ್ನು ಮೀಸಲಾತಿಗಾಗಿ 2ಎ ನಿಂದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು’ ಎಂದು ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಬಲ ನಾರಾಯಣಪ್ಪ ಒತ್ತಾಯಿಸಿದರು.

ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸಮುದಾಯದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ‘ಇದು ಆಗದಿದ್ದರೆ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಕುಂಬಾರ ಕಲಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್‌ ಮಾತನಾಡಿ, ‘ರಾಜ್ಯ ಸರ್ಕಾರ ತಮ್ಮ ಜನಾಂಗವನ್ನು ಗುರುತಿಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ನಿಗಮದಿಂದ ಸಮುದಾಯಕ್ಕೆ ದೊರೆಯುವ ಎಲ್ಲ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ’ ತಿಳಿಸಿದರು.

ಸಾಹಿತಿ ಎನ್‌.ಶಿವರಾಂ, ಶಿಕ್ಷಕ ಜಿ.ಕೃಷ್ಣಪ್ಪ, ಸಮುದಾಯದ ಮುಖಂಡರಾದ ಮಾಲೂರು ನಂಜುಂಡಪ್ಪ, ಎನ್‌.ಅಂಬರೀಶ್‌, ಕೃಷ್ಣಮೂರ್ತಿ, ಶಂಕರಪ್ಪ, ವೆಂಕಟಾಚಲಪತಿ, ಅಶ್ವತ್ಥಪ್ಪ, ಶ್ರೀರಾಮನಗರದ ಶಂಕರ, ಲಕ್ಷ್ಮಿನಾರಾಯಣ, ಬಾಲಕೃಷ್ಣ, ಮುನಿಕೃಷ್ಣ, ಎ.ನಾರಾಯಣಸ್ವಾಮಿ, ನೆರ್ನಕಲ್ಲು ಮಂಜು, ಶ್ರೀನಿವಾಸ, ಗೋವಿಂದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry