5

ಸ್ಮಶಾನಕ್ಕಾಗಿ ಗ್ರಾಮಸ್ಥರ ನಡುವೆ ಹಗ್ಗ ಜಗ್ಗಾಟ

Published:
Updated:

ಶಿಗ್ಗಾವಿ: ತಾಲ್ಲೂಕಿನ ಕುಂದೂರ, ಗುಡ್ಡದಚನ್ನಾಪುರ ನಡುವಿನ ಸ್ಮಶಾನ ಜಾಗೆ ಸರ್ವೆ ಮಾಡಿ, ಚೆಕ್‌ಬಂದಿ (ಹದ್ದು ಗುರುತಿಸುವುದು) ಹಾಕಬೇಕು ಎಂದು ಆಗ್ರಹಿಸಿ ಶವಸಂಸ್ಕಾರ ತಡೆದು ಸೋಮವಾರ ಗುಡ್ಡದಚನ್ನಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕುಂದೂರ ಗ್ರಾಮದಲ್ಲಿ ಪರಶುರಾಮ ಮಲ್ಲೇಶಪ್ಪ ವಾಲ್ಮೀಕಿ(10) ಎಂಬ ಬಾಲಕ ಸೋಮವಾರ ಅನಾರೋಗ್ಯದಿಂದ ಮೃತನಾಗಿದ್ದ. ಆತನ ಶವ ಸಂಸ್ಕಾರವನ್ನು ಕುಂದೂರ ಮತ್ತು ಗುಡ್ಡದಚನ್ನಾಪುರ ಗ್ರಾಮದ ನಡುವಿನ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಗುಡ್ಡದಚನ್ನಾಪುರ ಗ್ರಾಮಸ್ಥರು ಶವಸಂಸ್ಕಾರ ತಡೆದು ಈ ಖಾಲಿ ಜಾಗೆಯಲ್ಲಿ ಕುಂದೂರ, ಜಾಲಿಕಟ್ಟಿ ಹಾಗೂ ಗುಡ್ಡಚನ್ನಾಪುರ ಗ್ರಾಮಕ್ಕೆ ಸೇರಿದ ಸ್ಮಶಾನ ಜಾಗೆ ಎಂಬುದನ್ನು ಈ ವರೆಗೆ ಚೆಕ್‌ಬಂದಿ ಮಾಡಿಲ್ಲ. ಹೀಗಾಗಿ ಈ ಜಾಗೆಯಲ್ಲಿ ಶವಸಂಸ್ಕಾರ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಗುಡ್ಡದಚನ್ನಾಪುರ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

ಹಿನ್ನೆಲೆ: ಕಳೆದ ಐದು ವರ್ಷಗಳ ಹಿಂದೆ ಕುಂದೂರ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಗುಡ್ಡದಚನ್ನಾಪುರ, ಜಾಲಿಕಟ್ಟಿ, ಕುಂದೂರು ಗ್ರಾಮಗಳಿಗೆ ಸೇರಿ ಸುಮಾರು 4 ಎಕರೆ 20 ಗುಂಟೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ. ಆದರೆ ಈ ವರೆಗೆ ಕಂದಾಯ ಇಲಾಖೆ ಅಧಿಕಾಗಳು ಚೆಕ್‌ಬಂದಿ ಹಾಕಿಲ್ಲ. ಅದರಿಂದಾಗಿ ಯಾವ ಗ್ರಾಮಕ್ಕೆ ಯಾವ ಜಾಗೆ ಎಂಬುವುದು ತಿಳಿಯದ ಕಾರಣ ಈ ಸಮಸ್ಯೆ ಸುಮಾರು ವರ್ಷಗಳಿಂದ ನಡೆಯುತ್ತಿದೆ.

‘ಜಮೀನು ಇದ್ದವರು ತಮ್ಮ ಸ್ವಂತ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಾರೆ. ಆದರೆ ಜಮೀನು ಇಲ್ಲದವರು ಇಲ್ಲಿ ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ಈ ಸಮಸ್ಯೆ ಬರುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಚೆಕ್‌ಬಂದಿ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು’ ಎಂಬುದು ಕುಂದೂರ ಗ್ರಾಮಸ್ಥರ ಆಗ್ರಹವಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಶಿವಾನಂದ ರಾಣೆ, ಬಂಕಾಪುರ ನಾಡಕಚೇರಿ ಕಂದಾಯ ನಿರೀಕ್ಷಕ ಎಸ್‌.ಬಿ.ನಾಯಕ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಮುಳಗುಂದ ಪರಿಶೀಲನೆ ನಡೆಸಿ ಸ್ಮಶಾನ ಜಾಗೆ ಸಮಸ್ಯೆಯನ್ನು ತಕ್ಷಣ ಪರಿಹರಿಸಲಾಗುವುದು ಎಂದರು. ನಂತರ ಶವಸಂಸ್ಕಾರ ನೆರವೇರಿಸ ಲಾಯಿತು. ಕುಂದೂರ, ಗುಡ್ಡದಚನ್ನಾಪುರ ಗ್ರಾಮಸ್ಥರು ಇದ್ದರು.

* * 

ಗ್ರಾಮಸ್ಥರ ಸಭೆ ನಡೆಸಿ 10 ದಿನಗಳಲ್ಲಿ ಸರ್ವೆ ಕಾರ್ಯ ಮಾಡಿ ಚಕ್‌ಬಂದಿ ಹಾಕುವ ಮೂಲಕ ಎರಡು ಗ್ರಾಮಗಳ ಸ್ಮಶಾನ ಜಾಗೆ ಸಮಸ್ಯೆ ಪರಿಹಾರ ನೀಡಲಾಗುವುದು ಶಿವಾನಂದ ರಾಣೆ

ತಹಶೀಲ್ದಾರ್‌, ಶಿಗ್ಗಾವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry