7

ವಸತಿಗಾಗಿ 15 ವರ್ಷ ಅಲೆದ ಗುಡಿಸಲು ವಾಸಿ

Published:
Updated:

ಬಾಗೇಪಲ್ಲಿ: ‘ಬಡವರಿಗಾಗಿ, ವಸತಿ ಹೀನರಿಗೆ ಸರ್ಕಾರ ವಸತಿ ಯೋಜನೆಗಳನ್ನು ರೂಪಿಸಿವೆ. ಆದರೆ, ಹದಿನೈದು ವರ್ಷವಾದರೂ ಮನೆ ಕಲ್ಪಿಸಿಲ್ಲ. ಇನ್ನಾದರೂ ಸೂರು ಒದಗಿಸಬೇಕು’ ಎಂದು ತಾಲ್ಲೂಕಿನ ಗೂಳೂರು ಹೋಬಳಿ ಕೊತ್ತಕೋಟೆ ಗ್ರಾಮದ ಬಾವಯ್ಯ ಮನವಿ ಮಾಡಿದ್ದಾರೆ.

‘ವಸತಿಗಾಗಿ ಅಲೆದಾಡಿದರೂ ಸೂರು ಸಿಕ್ಕಿಲ್ಲ. ಆದರೆ, ಶೌಚಾಲಯ ನಿರ್ಮಿಸಲು ಅನುದಾನ ಕಲ್ಪಿಸುತ್ತಿದ್ದಾರೆ. ವಸತಿ ಕಲ್ಪಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕು’ ಎಂದು ಕೋರಿದ್ದಾರೆ.

‘ಪಂಚಾಯಿತಿಯಿಂದ 86 ಜನರಿಗೆ ವಸತಿ ಕಲ್ಪಿಸಲಾಗುತ್ತಿದೆ. ಇದರಲ್ಲಿ ಬಾವಯ್ಯ ಅವರ ಕುಟುಂಬಕ್ಕೂ ವಸತಿ ಕಲ್ಪಿಸಲಾಗುವುದು’ ಎಂದು ಕೊತ್ತಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರೆಡ್ಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry