ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ವಿಧಾನಸೌಧದ ಬಳಿ ರೈತರ ಪ್ರತಿಭಟನೆ

Last Updated 22 ನವೆಂಬರ್ 2017, 6:07 IST
ಅಕ್ಷರ ಗಾತ್ರ

ರಾಮನಗರ: ‘ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯ ಕರ್ತರು ಮಂಗಳವಾರ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.

‘ಎಪಿಎಂಸಿಯಲ್ಲಿ ರೈತರು ಉತ್ಪನ್ನ ನೇರವಾಗಿ ಮಾರಾಟ ಮಾಡಲು ಅವಕಾಶ ಇಲ್ಲದಂತಾಗಿದೆ. ದಲ್ಲಾಳಿಗಳ ಹಾವಳಿಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಜಾಣ ಕಿವುಡರಂತೆ ವರ್ತಿ ಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಬೇಕು. ಮಳೆ ಯಿಂದ ಸೊಪ್ಪು–ತರಕಾರಿ ಬೆಳೆಗಾರರು ನಷ್ಟ ಅನುಭವಿಸಿದ್ದು, ಅಂತಹವರಿಗೆ ಪರಿಹಾರ ನೀಡಬೇಕು. ಎಪಿಎಂಸಿ ಒಳಗೆ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ತಡೆ ಒಡ್ಡಬೇಕು. ಕಮಿಷನ್‌ ದಂಧೆಗೆ ನಿಯಂತ್ರಣ ಹೇರಬೇಕು. ರೈತರಿಗೆ ಪ್ರತ್ಯೇಕ ಮಳಿಗೆ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಎಂ.ಡಿ. ಶಿವಕುಮಾರ್, ವಿ.ಎಸ್. ಸುಜೀವನ್‌ ಕುಮಾರ್, ಕೆ. ಲಕ್ಷ್ಮಿನಾರಾಯಣ, ಗೋಪಿ, ಆರ್.ನಾರಾಯಣ, ವಿಶ್ವನಾಥ, ಕಿಶೋರ್‌ಕುಮಾರ್, ಪ್ರಕಾಶ, ಲಿಂಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT