7

ಶವವಿಟ್ಟು ಪ್ರತಿಭಟಿಸಿ, ಸ್ಮಶಾನಕ್ಕೆ ಭೂಮಿ ಪಡೆದರು

Published:
Updated:
ಶವವಿಟ್ಟು ಪ್ರತಿಭಟಿಸಿ, ಸ್ಮಶಾನಕ್ಕೆ ಭೂಮಿ ಪಡೆದರು

ಚಿಕ್ಕಬಳ್ಳಾಪುರ: ತಾಲ್ಲೂಕಿನ ಈರೇನಹಳ್ಳಿಯ ಗ್ರಾಮಸ್ಥರು ಮಂಗಳವಾರ ಸ್ಮಶಾನ ಜಾಗಕ್ಕಾಗಿ ಆಗ್ರಹಿಸಿ ಶವವಿಟ್ಟುಕೊಂಡು ಪ್ರತಿಭಟನೆ ನಡೆಸಿ, ಜಾಗ ಪಡೆಯುವಲ್ಲಿ ಯಶಸ್ವಿಯಾದರು.

ಗ್ರಾಮದಲ್ಲಿ ಸೋಮವಾರ ರಾತ್ರಿ ಮುನಿಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಅವರ ಶವ ಹೂಳಲು ಜಾಗವಿಲ್ಲದ ಕಾರಣಕ್ಕೆ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆಯಿಂದಲೇ ಶವದೊಂದಿಗೆ ಪ್ರತಿಭಟನೆ ಆರಂಭಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಕಂದಾಯ ನಿರೀಕ್ಷಕ ಮತ್ತು ಸರ್ವೇಯರ್‌ ಅವರನ್ನು ಕಳುಹಿಸಿ ಕೊಟ್ಟರು.

ಈ ಇಬ್ಬರು ಅಧಿಕಾರಿಗಳು ಗ್ರಾಮದ ಹೊರವಲಯದಲ್ಲಿದ್ದ ಸರ್ಕಾರಿ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಗುರುತಿಸಿ ಕೊಟ್ಟರು. ಆ ಜಾಗಕ್ಕೆ ಶವದೊಂದಿಗೆ ಸಾಗಲು ಸರಿಯಾದ ದಾರಿ ಇಲ್ಲದ್ದನ್ನು ಮನಗಂಡು ತಾಲ್ಲೂಕು ಆಡಳಿವೇ ಜೆಸಿಬಿ ತರಿಸಿ ದಾರಿಸಿ ನಿರ್ಮಿಸಿ ಕೊಟ್ಟಿತು. ಬಳಿಕ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದು ಸ್ಮಶಾನಕ್ಕೆ ಗುರುತಿಸಿದ ಜಾಗದಲ್ಲಿ ಮುನಿಸ್ವಾಮಿ ಅವರ ಅಂತ್ಯಸಂಸ್ಕಾರ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry