6

‘ಶೌಚಾಲಯ ಸ್ವಾಭಿಮಾನದ ಪ್ರತೀಕ’

Published:
Updated:

ರಟ್ಟೀಹಳ್ಳಿ: ‘ಪ್ರತಿ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳುವುದು ಸ್ವಾಭಿಮಾನದ ಪ್ರತೀಕ. ಆದ್ದರಿಂದ, ಪ್ರತಿ ಕುಟುಂಬದವರು ಶೌಚಾಲಯ ನಿರ್ಮಿಸಿಕೊಳ್ಳಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸ ಹದಡೇರ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯ್ತಿ ವತಿಯಿಂದ ಭಾನುವಾರ ನಡೆದ ವಿಶ್ವ ಶೌಚಾಲಯ ದಿನಾಚರಣೆ ನಿಮಿತ್ತ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಯಲು ಮುಕ್ತ ಶೌಚಾಲಯ ನಿರ್ಮಾಣದಿಂದ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳಿಗೆ ಶೌಚಾಲಯ ಬಳಸುವಂತೆ ಪ್ರೇರಣೆ ನೀಡಬೇಕು ಎಂದರು.

ಸಂಯೋಜಕ ಮಂಜುನಾಥ ಹೊರಕೇರಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪ್ರಕಾಶ ಸುಣಗಾರ, ಸದಸ್ಯರಾದ ಶಿವನಗೌಡ ದ್ಯಾವಕ್ಕಳವರ, ರಮೇಶ ಬಾಗೋಡಿ, ಎಸ್.ಬಿ.ಪಾಟೀಲ, ವಿ.ಆರ್.ಪೂಜಾರ, ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಸಂತೋಷ ಬಿಳಚಿ, ಮಂಜುನಾಥ ಚಲವಾದಿ, ಬಸವರಾಜ ಕಟ್ಟೇಕಾರ, ಮಂಜು ಬಿಳಚಿ ಹಾಗೂ ಭೀಮರಾಜ ಹೊಸಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry