7

ಬಾಲ್ಯವಿವಾಹ: ಆರೋಪಿಗಳಿಗೆ ಶಿಕ್ಷೆ

Published:
Updated:

ಹಾವೇರಿ: 18 ವರ್ಷದೊಳಗಿನ ಬಾಲಕಿಯನ್ನು ಮದುವೆಯಾದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಈ.ಕೆ.ಭೂತೆ ತೀರ್ಪು ನೀಡಿದ್ದಾರೆ.

ಮೊದಲ ಪ್ರಕರಣದಲ್ಲಿ ಮದುವೆಯಾಗಿದ್ದ ಸವಣೂರ ತಾಲ್ಲೂಕಿನ ಜಲ್ಲಾಪುರ ಗ್ರಾಮದ ಸೋಮನಗೌಡ ರೇವಣಗೌಡ ಅರಳಿಹಳ್ಳಿ ಹಾಗೂ ಮದುವೆ ಮಾಡಿಸಿದ ಅದೇ ಗ್ರಾಮದ ರೇವಣಗೌಡ ಶಿವನಗೌಡ ಅರಳಿಹಳ್ಳಿ ಮತ್ತು ಗಿರಿಜವ್ವ ಆರ್‌. ಅರಳಿಹಳ್ಳಿ ಅವರಿಗೆ ₨30 ಸಾವಿರ ದಂಡ ವಿಧಿಸಿದ್ದು, ದಂಡದ ಹಣವನ್ನು ಬಾಧಿತಗಳಿಗೆ ಪರಿಹಾರ ರೂಪದಲ್ಲಿ ನೀಡಲು ಆದೇಶ ಮಾಡಲಾಗಿದೆ.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಮದುವೆಯಾದ ಆರೋಪಿ ಹಿರೇಕೆರೂರಿನ ಮಂಜುನಾಥ ಯಾನೆ ಮಂಜ್ಯಾ ರಾಮಣ್ಣ ವಡ್ಡರ ಎಂಬಾತನಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಎರಡೂ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಐ.ವಿ.ಪಾಟೀಲ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry