7

ನಂದಿನಿ ಉತ್ಪನ್ನ ವಿದೇಶದಲ್ಲೂ ಪ್ರಖ್ಯಾತಿ

Published:
Updated:

ಮಾಲೂರು: ‘ನಂದಿನಿ ಹಾಲಿನ ಉತ್ಪನ್ನಗಳು ಗುಣಮಟ್ಟದಿಂದ ಕೂಡಿ ದ್ದು, ವಿದೇಶದಲ್ಲೂ ಪ್ರಖ್ಯಾತಿ ಪಡೆದಿವೆ’ ಎಂದು ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಹೇಳಿದರು.

ಕೋಚಿಮುಲ್ ವತಿಯಿಂದ ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಸಪ್ರಶ್ನೆ ಮತ್ತು ಸಂಗೀತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ನೀರಿನ ಸಮಸ್ಯೆ ಎದುರಾಗಿ ರಾಸು ಗಳಿಗೆ ಮೇವು ಸಿಗದ ಸಂದರ್ಭದಲ್ಲೂ ಗುಣಮಟ್ಟದ ಹಾಲು ಸರಬರಾಜು ಅಗುತ್ತಿತ್ತು ಎಂದರು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬರಗಾಲದ ಸಂದರ್ಭದಲ್ಲೂ ದಿನಕ್ಕೆ ಸುಮಾರು 9.50 ಲಕ್ಷ ಲೀಟರ್‌ ಸಂಗ್ರಹವಾಗುತ್ತಿತ್ತು ರೈತರನ್ನು ಆರ್ಥಿಕವಾಗಿ ಮತ್ತಷ್ಟು ಸಬಲ ರನ್ನಾಗಿಸಲು ವಿವಿಧ ಬಗೆಯ ಹಾಲಿನ ಉತ್ಪನ್ನ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬಿಇಒ ಮಾಧವರೆಡ್ಡಿ, ಶಾಲೆ ವ್ಯವಸ್ಥಾಪಕ ಶೈಲೇಶ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry