3

ತಾಲ್ಲೂಕಿನಾದ್ಯಂತ ಭತ್ತಕ್ಕೆ ಸೈನಿಕ ಹುಳ ಕಾಟ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಹೊಸನಗರ: ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಅಪಾರ ಪ್ರಮಾಣದ ಸೈನಿಕ(ಲದ್ದಿ) ಹುಳುವಿನ ಬಾಧೆ ಕಂಡು ಬಂದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈ ಸೈನಿಕ ಹುಳು ಹಗಲಿನ ಸಮಯದಲ್ಲಿ ಭತ್ತದ ಪೈರಿನ ಬುಡದಲ್ಲಿ ಅಡಗಿ ಕುಳಿತಿರುತ್ತದೆ. ಪೈರಿನ ಬುಡವನ್ನು ಅಗಲಿಸಿ ನೋಡಿದಾಗ ಮಾತ್ರ ಈ ಹುಳುಗಳು ಕಾಣುತ್ತದೆ. ಇವು ರಾತ್ರಿ ಹೊತ್ತಿನಲ್ಲಿ ಪೈರಿನ ಎಲೆಗಳನ್ನು ತಿನ್ನುತ್ತವೆ. ಇವುಗಳ ಬಾಧೆ ತೀವ್ರವಾದಲ್ಲಿ ಎಲೆಗಳನ್ನೆಲ್ಲ ತಿಂದು ಮಧ್ಯದ ದಂಟನ್ನು ಮಾತ್ರ ಉಳಿಸುತ್ತದೆ ಎಂದು ತಿಳಿಸಿದರು.

ಹತೋಟಿ ಕ್ರಮ: ಒಂದು ಎಕೆರೆ ಪ್ರದೇಶಕ್ಕೆ 2 ಕೆ.ಜಿ. ಬೆಲ್ಲವನ್ನು 5 ಲೀಟರ್ ನೀರಿನಲ್ಲಿ ಕರಗಿಸಿ, ಅದಕ್ಕೆ 250 ಮಿಲಿ ಮಾನೋಕ್ರೊಟೋಫಾಸ್ ಕೀಟನಾಶಕವನ್ನು ಸೇರಿಸಿ ಮಿಶ್ರ ಮಾಡುವುದು. ನಂತರ ಇದಕ್ಕೆ 20 ಕೆ.ಜಿ ಅಕ್ಕಿ ಅಥವಾ ಗೋಧಿ ತೌಡನ್ನು ಸೇರಿಸಿ ಚೆನ್ನಾಗಿ ಕಲಿಸಬೇಕು. ಈ ರೀತಿ ಮಾಡಿದ ಮಿಶ್ರಣವನ್ನು ಒಂದು ಚೀಲದಲ್ಲಿ ಕಟ್ಟಿ ಒಂದು ಡ್ರಮ್ಮಿನಲ್ಲಿ ಗಾಳಿಯಾಡದಂತೆ ಮುಚ್ಚಬೇಕು. ಈ ಮಿಶ್ರಣವನ್ನು ಮರುದಿನ ಸಂಜೆ ನಾಲ್ಕು ಗಂಟೆ ನಂತರ ಜಮೀನಿನಲ್ಲಿ ಸುತ್ತ ಹಾಕುವುದಲ್ಲದೇ ಜಮೀನಿನ ಮಧ್ಯೆ ಎರಚುವುದು ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.

25 ದಿನಗಳ ನಂತರ ಕಟಾವಿಗೆ ಬರುವ ಜಮೀನುಗಳಲ್ಲಿ ಈ ಮೇಲೆ ಹೇಳಿದ ವಿಷ ತಿಂಡಿ ಜೊತೆಗೆ ಮೆಲಾಥಿಯನ್ 50% ಇಅ 2 ಮಿಲಿ ಪ್ರತಿ ಲೀಟರ್ಗೆ ಸೇರಿಸಿ ಸಿಂಪರಣೆ ಕೂಡಾ ಮಾಡುವುದು. ಕೀಡೆಗಳು ಒಂದು ಜಮೀನಿನಿಂದ ಇನ್ನೊಂದು ಜಮೀನಿಗೆ ಹೋಗುವುದನ್ನು ತಡೆಯಲು ಜಮೀನಿನ ಸುತ್ತ 1-1/2 ಅಡಿ ಆಳದ ಕಂದಕ ತೋಡಿ ಅದರಲ್ಲಿ ಶೇ 5 ರ ಮೆಲಾಥಿಯನ್ ಹುಡಿಯನ್ನು ಉದುರಿಸುವಂತೆ ರೈತರಿಗೆ ಸಲಹೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry