ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟಕ್ಕೆ ಕೈ ತೋಟ ಬೆಳೆಸಿದ ಮಕ್ಕಳು

Last Updated 22 ನವೆಂಬರ್ 2017, 9:08 IST
ಅಕ್ಷರ ಗಾತ್ರ

ಶೆಟ್ಟೀಕೆರೆ: ಗೋಡೇಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಸಕ್ತಿ ವಹಿಸಿ ಶಾಲೆಯ ಆವರಣದಲ್ಲಿ ಕೈತೋಟ ಮಾಡಿಕೊಂಡು ತರಕಾರಿಗಳನ್ನು ಬೆಳೆದಿದ್ದಾರೆ.

ಶಿಕ್ಷಕ ಶಿವರಾಜು ಸಿ.ಆಸಕ್ತಿಯಿಂದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಬಿಸಿಯೂಟಕ್ಕೆ ಬೇಕಾಗಿರುವ ಮೆಂತ್ಯೆ, ದಂಟು, ಬದನೆ, ಟೊಮ್ಯಾಟೊ, ಕರಿಬೇವು, ನಿಂಬೆ, ಎಳ್ಳಿಕಾಯಿ, ಬಾಳೆ, ಹೀಗೆ ಬಗೆ ಬಗೆಯ ತರಕಾರಿಗಳನ್ನು ಶಾಲೆಯ ಆವರಣದಲ್ಲಿ ಬೆಳೆಯುತ್ತಿದ್ದಾರೆ.

ಮುಖ್ಯ ಶಿಕ್ಷಕ ಎನ್.ಎಸ್.ನೀಲಕಂಟಪ್ಪ ಮಾತನಾಡಿ, ‘ಶಾಲೆಯ ಒಟ್ಟು 108 ವಿದ್ಯಾರ್ಥಿಗಳಿಗೆ ಬೇಕಾದ ಅರ್ಧದಷ್ಟು ತಾಜಾ ತರಕಾರಿಯನ್ನು ಕೈತೋಟದಲ್ಲಿಯೇ ಬೆಳೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಜಿ.ಶಿವಣ್ಣ ಮಾತನಾಡಿ, ‘ತರಕಾರಿ ಜತೆ ಮಾವು, ಹಲಸು, ಗಸಗಸೆ, ತೆಂಗು, ತೇಗ ಹೀಗೆ ಹಲವು ಬಗೆಯ ಗಿಡಗಳನ್ನು ಬೆಳೆಸಿ ದೊಡ್ಡದಾದ ಮೇಲೆ ಆವರಣದ ಬೇರೊಂದು ಜಾಗದಲ್ಲಿ ಅವುಗಳನ್ನು ಬೆಳೆಸುತ್ತಿದ್ದೇವೆ’ ಎಂದು ತಿಳಿಸಿದರು.

ಶಿಕ್ಷಕ ಶಿವಣ್ಣ, ‘ತರಕಾರಿ ಬೆಳೆಯುದಕ್ಕೆ ಬೇಕಾದ ಬೀಜ, ಸಾವಯವ ಗೊಬ್ಬರವನ್ನು ಶಾಲೆಯ ಮಕ್ಕಳು ಬಹಳ ಆಸಕ್ತಿಯಿಂದ ತಂದುಕೊಡುತ್ತಾರೆ. ಇನ್ನಿತರ ಖರ್ಚುಗಳನ್ನು ವೃತ್ತಿ ಶಿಕ್ಷಕರೆ ತುಂಬುತ್ತಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT