3

ದಾಸಣ್ಣನ ಕೆರೆ: ಚಿರತೆ ಕಳೇಬರ ಪತ್ತೆ

Published:
Updated:

ಪಾವಗಡ: ತಾಲ್ಲೂಕಿನ ನಿಡಗಲ್ ಅರಣ್ಯ ಪ್ರದೇಶದ ದಾಸಣ್ಣನ ಕೆರೆ ಬಳಿ ಮಂಗಳವಾರ ಸುಮಾರು 2ರಿಂದ 3 ವರ್ಷದ ಗಂಡು ಚಿರತೆ ಕಳೇಬರ ಪತ್ತೆಯಾಗಿದೆ. ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಈ ಕಳೇಬರ ಸಿಕ್ಕಿದೆ.

‘ಹಸಿವಿನಿಂದ ಚಿರತೆ ಸತ್ತಿರುವ ಸಾಧ್ಯತೆ ಇದೆ’ ಎಂದು ಚಿರತೆಯ ಶವ ಪರೀಕ್ಷೆ ನಡೆಸಿದ ಪಶು ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ `ಪ್ರಜಾವಾಣಿ' ಗೆ ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಾಗರಾಜು, ವಲಯ ಅರಣ್ಯಾಧಿಕಾರಿ ಜಯಲಕ್ಷ್ಮಿ, ಸಹಾಯಕ ವಲಯ ಅರಣ್ಯಾಧಿಕಾರಿ ಬಸವರಾಜು, ಅರಣ್ಯ ರಕ್ಷಕ ಗಂಗರಾಜು, ಸಿಬ್ಬಂದಿ ದಾಸಣ್ಸ್ಥಣನಕೆರೆ ಬಳಿ ಸ್ಥಳ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry