3

ಭಾರತ ಕಲಾ ಶ್ರೀಮಂತಿಕೆಯ ನಾಡು

Published:
Updated:

ಉಡುಪಿ: ಭಾರತೀಯ ಚಿತ್ರಕಲೆಯಲ್ಲಿ ಇರುವ ಕಲಾ ಶ್ರೀಮಂತಿಕೆ ಇತರೆ ಯಾವುದೇ ದೇಶದ ಕಲೆಯಲ್ಲಿ ಕಾಣ ಸಿಗುವುದು ಕಷ್ಟ ಎಂದು ಆರ್ಟ್‌ ಗ್ಯಾಲರಿ ನಿರ್ದೇಶಕ ವಸಂತ್‌ ರಾವ್‌ ತಿಳಿಸಿದರು. ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ಮಂಗಳವಾರ ನಗದಲ್ಲಿ ಆಯೋಜಿದ್ದ ‘ಸ್ವರ್ಶ 2017’ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಪಾಶ್ಚಾತ್ಯ ದೇಶಗಳಲ್ಲಿ ಕಲೆಯನ್ನು ಬಾಹ್ಯ ರೂಪದಲ್ಲಿ ಕಾಣುತ್ತಾರೆ. ಆದರೆ, ಭಾರತೀಯರಲ್ಲಿ ಆಂತರಿಕವಾಗಿ ನಿತ್ಯದ ಜೀವನ ಶೈಲಿಯಲ್ಲಿ ಅದು ಕಾಣಸಿಗುತ್ತದೆ. ಸಮಾರಂಭದಲ್ಲಿ ಉಡುವ ಬಟ್ಟೆ, ತಿನ್ನುವ ಆಹಾರ ಬಡಿಸುವ ಶೈಲಿ, ವಿಭಿನ್ನ ರೀತಿಯಾದ ಕಲೆಯನ್ನು ಕಾಣಬಹುದು. ಇದು ನಮ್ಮಗೂ ಹಾಗೂ ಇತರೆ ದೇಶಕ್ಕೆ ಇವರು ಬಹುದೊಡ್ಡ ವ್ಯತ್ಯಾಸ ಎಂದರು.

ಭಾರತೀಯ ಕಲೆ ವಿಶ್ವದ ಅತ್ಯಂತ ಶ್ರೇಷ್ಠ ಕಲೆಯಾಗಬೇಕಿತ್ತು. ಸತತ ವಿದೇಶಿಗರ ಸತತ ದಾಳಿಯಿಂದ ಭಾರತೀಯ ಕಲಾ ಶ್ರೀಮಂತಿಕೆ ನಶಿಸಿ ಹೋಗಿದೆ. ಇತರ ವಿದೇಶಿಗರ ಕಲಾ ಸಂಸ್ಕೃತಿಯನ್ನು ನಮ್ಮವರ ಮೇಲೆ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ.

ಇದರತ್ತ ವಿದ್ಯಾರ್ಥಿಗಳು ಗಮನ ಹರಿಸದೆ ಮುಂದಿನ ಪೀಳಿಗೆ ಭಾರತೀಯ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸ ಬೇಕಾಗಿದೆ ಎಂದು ಹೇಳಿದರು. ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕ ಡಾಯು.ಸಿ. ನಿರಂಜನ್‌, ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ಚೇತನ್‌ ಸ್ವಾಗತಿಸಿದರು.

ಸಾರ್ವಜನಿಕ ವಿಕ್ಷಣೆಗೆ ಅವಕಾಶ

ಚಿತ್ರಕಲಾ ಪ್ರದರ್ಶನದಲ್ಲಿ ಒಟ್ಟು 28 ವಿವಿಧ ಪ್ರಕಾರದ ಕಲಾಕೃತಿ ಪ್ರದರ್ಶನಕ್ಕೆ ಇಡಲಾಗಿದೆ. ಇದೇ 26ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ವರೆಗೆ ಸಾರ್ವಜನಿಕ ವಿಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry