ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದಲೇ ದೌರ್ಜನ್ಯ, ಅವರು ಏನು ಮಾಡಿದರೂ ನಡೆಯುತ್ತದೆಯೆ? ಆರೋಪಿತ ಯುವಕನ ತಾಯಿ ಆಕ್ರೋಶ

ತುವಕೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ
Last Updated 22 ನವೆಂಬರ್ 2017, 13:43 IST
ಅಕ್ಷರ ಗಾತ್ರ
ADVERTISEMENT

ತುಮಕೂರು: 'ನಮ್ಮ ಮಗ ಯೂಸೂಫ್ ಮತ್ತು ಸಂಬಂಧಿ ರಿಯಾಜ್ ಪಾಷಾ ಯಾವುದೇ ತಪ್ಪು ಮಾಡಿಲ್ಲ, ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ' ಎಂದು ಯೂಸೂಫ್ ತಾಯಿ ಅಫ್ರೊಜ್ ಆರೋಪಿಸಿದರು.

ಸುಖಾ ಸುಮ್ಮನೆ ಪೊಲೀಸರೊಂದಿಗೆ ಜಗಳ ಮಾಡಲಾಗುತ್ತದೆಯೇ? ಪೋಲಿಸರೇ ನಮ್ಮ ಹುಡುಗರ ವಾಹನ ತಡೆದು ಏಕಾ ಏಕಿ ದೌರ್ಜನ್ಯ ನಡೆಸಿದ್ದಾರೆ. ಹೆಲ್ಮೆಟ್ ಹಾಕಿಲ್ಲದಿದ್ದರೆ ದಂಡ ಹಾಕಿ ಕ್ರಮ ಜರುಗಿಸಲಿ. ದೌರ್ಜನ್ಯ ಯಾಕೆ ಮಾಡಬೇಕು. ಠಾಣೆಯಲ್ಲಿ ನಮ್ಮ ಮಕ್ಕಳನ್ನೂ ಭೇಟಿ ಮಾಡಲು ಅವಕಾಶ ಕೊಡುತ್ತಿಲ್ಲ. ಪೊಲೀಸರು ಏನು ಮಾಡಿದರೂ ನಡೆಯುತ್ತದೆಯೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಿಯಾಜ್ ಪಾಷಾ ನಮ್ಮ ಸಂಬಂಧಿಕ. ಯೂಸೂಫ್ ನಮ್ಮ ಮಗನಾಗಿದ್ದು, ಬಿ.ಕಾಂ ಓದುತ್ತಿದ್ದಾನೆ. ರಿಯಾಜ್ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾನೆ. ಅಂಗಡಿಗೆ ಏನೊ ತರಬೇಕಾಗಿದೆ ಎಂದು ಹೋಗಿದ್ದಾಗ ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಆಪಾದಿಸಿದರು.

ಭೇಟಿಗೆ ನಿರಾಕರಣೆ: ಹೊಸ ಬಡಾವಣೆ ಠಾಣೆಯಲ್ಲಿದ್ದ ಆರೋಪಿತರಾದ ಯೂಸೂಫ್ ಮತ್ತು ರಿಯಾಜ್ ಅವರನ್ನು ಭೇಟಿ ಮಾಡಲು ಕುಟುಂಬದವರಿಗೆ ಅವಕಾಶ ನಿರಾಕರಿಸಿದರು. ಮಾಧ್ಯಮದವರಿಗೂ ಆರೋಪಿಗಳ ಹೇಳಿಕೆ ಪಡೆಯಲು ಬಿಡಲಿಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಹೀಗಾಗಿ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದು ಮಾಧ್ಯಮದವರಿಗೆ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ, ಸಿಪಿಐ ರಾಧಾಕೃಷ್ಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT