7

ಜಾಗ್ವಾರ್‌ನಿಂದ ಸ್ವದೇಶಿ ನಿರ್ಮಿತ ಎಫ್-ಪೇಸ್ ಕಾರು ಬಿಡುಗಡೆ

Published:
Updated:
ಜಾಗ್ವಾರ್‌ನಿಂದ ಸ್ವದೇಶಿ ನಿರ್ಮಿತ ಎಫ್-ಪೇಸ್ ಕಾರು ಬಿಡುಗಡೆ

ಜಾಗ್ವಾರ್ ಇದೀಗ ಭಾರತದಲ್ಲಿಯೇ ತಯಾರಾಗಲಿದೆ. ಇದರ ಮೊದಲ ವಾಹನ ಎಸ್‌ಯುವಿ ಎಫ್-ಪೇಸ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಸ್ಪೋರ್ಟ್ಸ್‌ ಕಾರಿನ ಪ್ರತಿರೂಪದಂತಿರುವ ಜಾಗ್ವಾರ್ ಎಫ್-ಪೇಸ್, 2.0 ಲೀಟರ್‌ 4 ಸಿಲೆಂಡರ್, 132 ಕೆಡಬ್ಲೂ ಟರ್ಬೋಚಾರ್ಜಡ್ ಇಂಜಿನಿಯಂ ಡೀಸೆಲ್ ಎಂಜಿನ್ ಹೊಂದಿದೆ. ಈ ಎಫ್‌ ಪೇಸ್‌ ಅನ್ನು ಸಂಪೂರ್ಣ ದೇಸೀಯವಾಗಿ ತಯಾರಿಸಿರುವುದಾಗಿ ಜಾಗ್ವಾರ್ ಲ್ಯಾಂಡ್‌ರೋವರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ರೋಹಿತ್ ಸೂರಿ ಹೇಳಿಕೊಂಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಜಾಗ್ವಾರ್ ಎಫ್-ಪೇಸ್ ಬಿಡುಗಡೆಗೊಂಡಿದ್ದು, ದೇಶದಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಪೂರ್ಣ ಸ್ವದೇಶಿಯಾಗಿ ಕಾರು ನಿರ್ಮಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದ್ದಾರೆ.

ಅಡಾಪ್ಟಿವ್ ಎಲ್‍ಇಡಿ ಹೆಡ್‌ಲೈಟ್‌ಗಳು, ಆ್ಯಕ್ಟಿವಿಟಿ ಕೀ, ವೈ-ಫೈ ಹಾಟ್‌ಸ್ಪಾಟ್‌ ಮತ್ತು ಪ್ರೋ ಸರ್ವೀಸ್ ಸೌಲಭ್ಯ ಹೊಂದಿದೆ. ರಿಯರ್ ರೆಕ್ಲೈನ್ ಸೀಟುಗಳು, ಫೋರ್-ಝೋನ್ ಕ್ಲೈಮೇಟ್ ಕಂಟ್ರೋಲ್, 380 ಡಬ್ಲ್ಯೂ ಮೆರಿಡಿಯನ್ ಸೌಂಡ್ ಸಿಸ್ಟಂ, ಒಳಭಾಗದಲ್ಲಿ ಮೂಡ್ ಲೈಟ್ (10 ಬಣ್ಣಗಳು) ಸೇರಿದಂತೆ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ₹60.02 ಲಕ್ಷದಿಂದ ಆರಂಭ. ಮುಂಗಡ ಬುಕ್ಕಿಂಗ್ ಶುರುವಾಗಿದ್ದು, 2017ರ ನವೆಂಬರ್ ಅಂತ್ಯದೊಳಗೆ ಗ್ರಾಹಕರ ಕೈಸೇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry