7

ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

Published:
Updated:
ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

ಮಂಡ್ಯ: ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಅವರ ಪುತ್ರಿಯ ವಿವಾಹದ ಅದ್ದೂರಿ ವಿಡಿಯೊ ಆಮಂತ್ರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಯ ವಿಡಿಯೊ ಆಮಂತ್ರಣ ಕೂಡ ವೈರಲ್‌ ಆಗಿತ್ತು. ಇದೇ ಮಾದರಿಯಲ್ಲಿ ಎಲ್‌.ಆರ್‌. ಶಿವರಾಮೇಗೌಡರು ಮಗಳ ಮದುವೆಗೆ ವಿಡಿಯೊ ಆಮಂತ್ರಣ ನೀಡಿದ್ದಾರೆ.

ಬರುವ ಡಿಸೆಂಬರ್ 6 ಮತ್ತು 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ನಡೆಯಲಿದೆ. ಶಿವರಾಮೇಗೌಡ ಅವರ ಪುತ್ರಿ ಶಿವಲಾಲ್‌ ಮತ್ತು ಕಾಮಿನಿ ದಂಪತಿಯ ಪುತ್ರ ರಾಜೀವ್‌ ಅವರನ್ನು ಮದುವೆಯಾಗಲಿದ್ದಾರೆ.

ಆಮಂತ್ರಣದ ವಿಡಿಯೊವನ್ನು ಅದ್ದೂರಿ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ.  ಆಮಂತ್ರಣದ ಹಾಡಿಗೆ ಕಲಾವಿದರು ಆಕರ್ಷಕ ನೃತ್ಯ ಮಾಡಿದ್ದಾರೆ. ಶಿವರಾಮೇಗೌಡ ದಂಪತಿ ವಿವಾಹ ಆಮಂತ್ರಣ ಕೋರುವುದು ಈ ವಿಡಿಯೊದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry