7

‘ಕಾಲುವೆ ಕೊಳಚೆ ತೆರವುಗೊಳಿಸಿ’

Published:
Updated:

ರಾಯಬಾಗ: ‘ಪಟ್ಟಣದ ಒಂದನೆ ವಾರ್ಡ್‌ನಲ್ಲಿನ ಕಾಲುವೆಯಲ್ಲಿ ಕೊಳಚೆ ತುಂಬಿಕೊಂಡಿದೆ. ಇದರಿಂದ ನೀರು ಕಟ್ಟಿಕೊಂಡು ದುರ್ವಾಸನೆ ಉಂಟಾಗಿದೆ. ಕೂಡಲೇ ಕೊಳಚೆ ತೆರವುಗೊಳಿಸಿ ಕಾಲುವೆ ದುರಸ್ತಿ ಮಾಡಬೇಕು’ ಎಂದು ಪಿ.ಎಲ್.ಡಿ ಬ್ಯಾಂಕ್‌ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಅವರು ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಸಲಹೆ ನೀಡಿದರು.

ಪಟ್ಟಣದ ಒಂದನೇ ವಾರ್ಡ್‌ನ ನಿವಾಸಿಗಳ ಕುಂದುಕೊರತೆಯನ್ನು ಮಂಗಳವಾರ ಆಲಿಸಿದ ಮಾತನಾಡಿದ ಅವರು, ಪಟ್ಟಣದ ಹೊರ ವಲಯಲ್ಲಿ ಹಾದು ಹೋಗುವ 3 ಕಿ.ಮೀ ಉದ್ದದ ಕಾಲುವೆಗೆ ಪೈಪ್‌ಗಳನ್ನು ಹಾಕುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ’ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ಬಿ.ಎಸ್. ಗಡ್ಡೆ, ಕಲ್ಲಪ್ಪ ಹಳಿಂಗಳಿ, ರಾಜು ತರಾಳ, ಹನಮಂತ ಸಾನೆ, ಜಾವೀದ್‌ ಮೋಮಿನ್‌, ಎ.ಎಸ್. ಬನಹಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry