7

ಮಹಾರಾಷ್ಟ್ರ ಕತ್ತೆಗಳ ಹಾಲಿಗೆ ಬೇಡಿಕೆ

Published:
Updated:

ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿನ ಮಹಾರಾಷ್ಟ್ರ ಮೂಲದ ಕತ್ತೆಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.  ಜನರು ಒಂದು ಟೀ ಗ್ಲಾಸ್‌ ಹಾಲಿಗೆ ₹ 100 ನಂತೆ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಮಹಾರಾಷ್ಟ್ರದ ನಾಚಿದಡಿ ಜಿಲ್ಲೆಯ ಗುರುವಾಡ ನಗರದ 30 ಕತ್ತೆಗಳು ಪಟ್ಟಣದಲ್ಲಿ ಬೀಡು ಬಿಟ್ಟಿವೆ.

‘ಕತ್ತೆ ಹಾಲು ಕುಡಿಯುವುದರಿಂದ ಮಂಡಿಚಿಪ್ಪಿನ ನೋವು, ಹೊಟ್ಟೆ ಉಬ್ಬರ, ಗ್ಯಾಸ್ಟ್ರೀಕ್, ಅಸ್ತಮಾ , ವಾತ, ಮೂರ್ಚೆ ರೋಗ ವಾಸಿಯಾಗುತ್ತದೆ. ಅಲ್ಲದೇ ಈ ಹಾಲಿನಿಂದ ರೋಗ ನಿರೋಧಕ ಶಕ್ತಿ ಅಡಗಿದೆ’ ಎಂದು ಕತ್ತೆಗಳ ಮಾಲಿಕ ಬಾಲಾಜಿ ಅವರು ಹೇಳುತ್ತಾರೆ.

ಹಾಲನ್ನು ಮನೆ ತೆರಳಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಒಂದು ಕಡೆ ಜನ ಖರೀದಿ ಮಾಡಲು ಮುಗಿಬೀಳುತ್ತಿದ್ದರು. ಇದನ್ನು ಕುತೂಹಲದಿಂದ ನೋಡುವರ ಸಂಖ್ಯೆ ಕಡಿಮೆ ಇರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry