7

ನಾಯಿಗಳ ಹಾವಳಿ: ತತ್ತರಿಸಿದ ಜನರು

Published:
Updated:

ಬಾಗೇಪಲ್ಲಿ: ‘ಪಟ್ಟಣದ ವಿವಿಧ ಬಡಾವಣೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ದೂರಿದ್ದಾರೆ. ಪಟ್ಟಣದ ಕುಂಬಾರಪೇಟೆ, ವಾಲ್ಮೀಕಿನಗರ, ನೇತಾಜಿವೃತ್ತ, ಎಸ್‌.ಬಿ.ಎಂ, ನ್ಯೂಹಾರಿಜನ್ ಶಾಲೆ, ಶಂಕರಮಠ, ಮಿನಿಕ್ರೀಡಾಂಗಣ ರಸ್ತೆಯಲ್ಲಿ ನಾಯಿಗಳ ಹಿಂಡಾಗಿ ಓಡಾಡುತ್ತವೆ. ಇದರಿಂದ ಮಕ್ಕಳು ವಯೋವೃದ್ಧರು ಓಡಾಡುವುದು ಕಷ್ಟವಾಗಿದೆ’ ಎಂದು ತಿಳಿಸಿದರು.

‘ಅಷ್ಟೇ ಅಲ್ಲ ವಾಹನ ಸವಾರರನ್ನು ಬೆನ್ನು ಹತ್ತುವ ನಾಯಿಗಳಿಂದ ತಪ್ಪಿಸುವ ಬರದಲ್ಲಿ ಬಿದ್ದು ಆಸ್ಪತ್ರೆ ಸೇರಿದ ಹಲವು ಉದಾಹರಣೆಗಳಿವೆ’ ಎಂದು ತಿಳಿಸಿದರು. ‘ಪಟ್ಟಣದ ಮುಖ್ಯರಸ್ತೆಗೆ ಅಂಟಿಕೊಂಡು ಮೀನು, ಮಾಂಸದ ಅಂಗಡಿಗಳು, ಹೋಟೆಲ್‌ಗಳ ತಿಂಡಿ ತಿಂದು, ಬಸ್ ನಿಲ್ದಾಣ, ಖಾಲಿ ನಿವೇಶನಗಳಲ್ಲಿ ಬೀಡು ಬಿಟ್ಟಿವೆ’ ಎಂದು ತಿಳಿಸಿದರು.

‘ಜನರು ಕೈಯಲ್ಲಿ ತಿಂಡಿ, ಚೀಲ ಹಿಡಿದು ಹೊರಟರೆ ದಾಳಿ ಮಾಡುತ್ತವೆ. ಮನೆಯ ಮುಂದೆ ಧನ-ಕರುಗಳ ಮೇಲೆ ಹಿಂಡುಗಟ್ಟಲೆ ಬಂದು ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣಗಳು ಸಾಕಷ್ಟಿವೆ ಎಂದು ಹೇಳಿದರು.

‘ಬೆಳಿಗ್ಗೆ ಪತ್ರಿಕಾ ವಿತರಕರಿಗೆ ನಾಯಿಗಳ ಅಬ್ಬರ ನಿತ್ಯ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟವರು ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು’ ಎಂದು ಸ್ಥಳೀಯ ಮುಖಂಡ ಗೂಳೂರು ಲಕ್ಷ್ಮಿನಾರಾಯಣ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry