ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ವಿರೋಧಿ ಶಾಸಕರನ್ನು ಕೈಬಿಡಿ

Last Updated 24 ನವೆಂಬರ್ 2017, 7:17 IST
ಅಕ್ಷರ ಗಾತ್ರ

ಶಿರಹಟ್ಟಿ: ಪರಿಶಿಷ್ಟ ಜಾತಿಯಲ್ಲಿ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯವರಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಅನ್ವಯ ಒಳಮೀಸಲಾತಿ ಕಲ್ಪಿಸಲು ವಿರೋಧಿಸುತ್ತಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ ಸೇನೆ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಶಾಸಕರ ಸದಸ್ಯತ್ವ ರದ್ದುಪಡಿಸಿ, ದಲಿತರಿಗೆ ನ್ಯಾಯ ದೊರಕಿಸಿಕೊಬೇಕು. ಹಲವು ದಶಕಗಳಿಂದ ದಲಿತರು ನಿರಂತರ ಶೋಷಣೆಗೆ ಅನುಭವಿಸುತ್ತಿದ್ದಾರೆ. ಒಳಮೀಸಲಾತಿ ವಿರೋಧಿಸುತ್ತಿರುವುದರ ಹಿಂದೆ ಕಾಣದ ಕೈಗಳಿವೆ’ ಎಂದು ಪ್ರತಿಭಟನಾಕಾರರು ದೂರಿದರು. ಸದಾಶಿವ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್‌ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಗಡಾದ, ಫಕೀರೇಶ ಮ್ಯಾಟಣ್ಣವರ, ನಾಗರಾಜ ಪೋತರಾಜ, ಸುರೇಶ ಬೀರಣ್ಣವರ, ಹನುಮಂತಪ್ಪ ಹುಯಿಲಗೋಳ, ಮುತ್ತುರಾಜ ಭಾವಿಮನಿ, ಸಂಜು ಗೊಡೆಣ್ಣವರ, ಉಡಚಪ್ಪ ನೀಲಣ್ಣವರ, ರಂಗಪ್ಪ ಗುಡಿಮನಿ, ಚಂದ್ರಶೇಖರ ಹರಿಜನ, ದೇವರಾಜ ಕಟ್ಟಿಮನಿ, ಮಹಾಂತೇಶ ಗುಡಿಮನಿ, ಚಿನ್ನು ನಾಡಿಗೇರ, ಮರಿಯಪ್ಪ ಕಂಟೆಮ್ಮನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT