7

‘ತಾಲ್ಲೂಕು ರಚನೆ: ಹೈಕೋರ್ಟ್ ಮೆಟ್ಟಿಲೇರಲು ಚಿಂತನೆ’

Published:
Updated:

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆ ಹೋರಾಟಕ್ಕೆ ಗೋಣಿಕೊಪ್ಪಲು ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಮರ್ಚೆಂಟ್ ಬ್ಯಾಂಕ್ ಪಿಗ್ಮಿ ಸಂಗ್ರಹಕಾರರು ಬೆಂಬಲ ಸೂಚಿಸಿ ಗುರುವಾರ ಧರಣಿ ನಡೆಸಿದರು.

ವಾಣಿಜ್ಯೋದ್ಯಮ ಸಂಘದ ಚಿರಿಯಪಂಡ ಉಮೇಶ್ ಉತ್ತಪ್ಪ, ‘ತಾಲ್ಲೂಕು ರಚನೆಗೆ ಸರ್ಕಾರ ಪೂರಕವಾಗಿ ಸ್ಪಂದಿಸದಿದ್ದರೆ ಹೈಕೋರ್ಟ್‌ಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಕೆ.ಕೆ.ಸುನಿಲ್ ಮಾದಪ್ಪ, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಪೂಣಚ್ಚ, ಪದಾಧಿಕಾರಿಗಳಾದ ಎಂ.ಪಿ.ಕೇಶವಕಾಮತ್, ಪೊನ್ನಿಮಾಡ ಸುರೇಶ್, ಕೆ.ಬಿ.ಗಿರೀಶ್ ಗಣಪತಿ, ಸುಮಿ ಸುಬ್ಬಯ್ಯ, ರತಿ ಸಚ್ಚಪ್ಪ, ರಾಮಾಚಾರಿ, ಬಾಲಕೃಷ್ಣ ರೈ, ಸತೀಶ್ ಸಿಂಗಿ ಪಾಲ್ಗೊಂಡಿದ್ದರು.

ಪೊನ್ನಂಪೇಟೆ ಪಟ್ಟಣದಿಂದ ಧರಣಿ ನಿರತ ಸ್ಥಳದವರೆಗೆ ಮೆರವಣಿಗೆ ನಡೆಸಿ ಬಳಿಕ ನಾಡಕಚೇರಿ ಉಪ ತಹಶಿಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry