7

ಮಂಗಳೂರಿನ ಸಿಗಡಿ ಸವಿ

Published:
Updated:
ಮಂಗಳೂರಿನ ಸಿಗಡಿ ಸವಿ

ಮಾಂಸಾಹಾರಗಳಲ್ಲಿ ಆರೋಗ್ಯಕರವಾದದ್ದು ಸಮುದ್ರದ ಉತ್ಪನ್ನಗಳು. ಅದರಲ್ಲೂ ಮೃದುಜೀವಿಯಾದ ಸಿಗಡಿ ಎಲ್ಲರ ಅಚ್ಚುಮೆಚ್ಚು. ಸಿಗಡಿಯಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಸಿಗಡಿ ಫ್ರೈ, ಸಿಗಡಿ ಸಾರು ಇದರಲ್ಲಿ ಹೆಚ್ಚು ಪ್ರಸಿದ್ಧಿ. ಈ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ರೇಷ್ಮಾ ಶೆಟ್ಟಿ.

ಸಿಗಡಿ ಫ್ರೈ

ಬೇಕಾಗುವ ಸಾಮಗ್ರಿಗಳು

ಸಿಗಡಿ – 20

ಹೆಚ್ಚಿದ ಈರುಳ್ಳಿ – 1

ಹೆಚ್ಚಿದ ಟೊಮೆಟೊ – 1

ಹೆಚ್ಚಿದ ಶುಂಠಿ – 1

ಬೆಳ್ಳುಳ್ಳಿ ಎಸಳು ಜಜ್ಜಿದ್ದು – 1ಚಮಚ

ಹೆಚ್ಚಿದ ಹಸಿಮೆಣಸಿನಕಾಯಿ – 2

ಸಾಸಿವೆ – 1ಚಮಚ

ಕರಿಬೇವು – ಸ್ವಲ್ಪ

ಒಣಮೆಣಸು – 1

ಎಣ್ಣೆ – 1ಟೇಬಲ್ ಚಮಚ

ಅರಿಶಿಣ ಪುಡಿ – 1/4ಟೇಬಲ್ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಪೇಸ್ಟ್‌ಗೆ:

ಕೊತ್ತಂಬರಿ ಬೀಜ –

2ಟೇಬಲ್ ಚಮಚ (ಹುರಿದಿದ್ದು)

ಜೀರಿಗೆ – 1ಟೇಬಲ್ ಚಮಚ (ಹುರಿದಿದ್ದು)

ಕೆಂಪುಮೆಣಸು ಹುರಿದಿದ್ದು – 6ರಿಂದ 7

ಸಾಸಿವೆ – 1/4ಚಮಚ (ಹುರಿದಿದ್ದು)

ಚಿಟಿಕೆ ಮೆಂತ್ಯ – ಹುರಿದಿದ್ದು

ತುರಿದ ಕಾಯಿ – 1/2ಕಪ್

ಹುಣಸೆಹಣ್ಣಿನ ಪೇಸ್ಟ್‌ – 1ಟೇಬಲ್‌ ಚಮಚ

ತಯಾರಿಸುವ ವಿಧಾನ

ಸಿಗಡಿಯನ್ನು ಚೆನ್ನಾಗಿ ತೊಳೆದು ತಲೆ ಹಾಗೂ ಮೈಮೇಲಿನ ಚಿಪ್ಪನ್ನು ತೆಗೆದು ಬದಿಗಿರಿಸಿ. ಹುಣಸೆಹಣ್ಣಿನ ರಸ ಮತ್ತು ತೆಂಗಿನತುರಿ ಹೊರತು ಪಡಿಸಿ ಡ್ರೈ ಪೇಸ್ಟ್‌ಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಉಳಿದ ಸಾಮಗ್ರಿಗಳನ್ನು ಸೇರಿಸಿ ತರಿತರಿಯಾಗಿ ರುಬ್ಬಿಕೊಂಡು ಒಂದು ಕಡೆ ಇರಿಸಿಕೊಳ್ಳಿ. ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಅದು ಕಾದ ಮೇಲೆ ಸಾಸಿವೆ, ಬೆಳ್ಳುಳ್ಳಿ, ಹುರಿದ ಕೆಂಪುಮೆಣಸು ಮತ್ತು ಕರಿಬೇವು ಸೇರಿಸಿ.

ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಹಸಿಮೆಣಸು ಮತ್ತು ಶುಂಠಿ ಸೇರಿಸಿ. ನಂತರ ಹೆಚ್ಚಿದ ಟೊಮೆಟೊ ಹಾಕಿ ಸಾಫ್ಟ್ ಆಗುವವರೆಗೂ ಫ್ರೈ ಮಾಡಿ. ಈ ಎಲ್ಲಾ ಮಿಶ್ರಣಕ್ಕೆ ಸಿದ್ಧಪಡಿಸಿಕೊಂಡ ಸಿಗಡಿ, ಅರಿಶಿಣ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಕುದಿಸಿ. ನಂತರ ಪಾತ್ರೆಯನ್ನು ಮುಚ್ಚಿ 5ರಿಂದ6 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ನೀರು ಬೇಕು ಎನ್ನಿಸಿದರೆ ಇನ್ನಷ್ಟು ಸೇರಿಸಿ. ಗ್ರೇವಿ ಸ್ವಲ್ಪ ದಪ್ಪ ಹದಕ್ಕೆ ಬಂದಾಗ ಹುರಿದ ತೆಂಗಿನತುರರಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು 2ರಿಂದ3 ನಿಮಿಷ ಕುದಿಸಿ. ಈಗ ಖಾರವಾದ ಸಿಗಡಿ ಸುಕ್ಕ ತಿನ್ನಲು ರೆಡಿ.

* * 

ಸಿಗಡಿ ಗಸಿ

ಬೇಕಾಗುವ ಸಾಮಗ್ರಿಗಳು

ನೆನೆ ಇಡಲು

ಉಪ್ಪು – 1ಟೇಬಲ್ ಚಮಚ

ಅರಿಶಿಣ ಪುಡಿ – 1ಟೇಬಲ್ ಚಮಚ

ನಿಂಬೆರಸ – 1/2ಟೇಬಲ್ ಚಮಚ

ರುಬ್ಬಿಕೊಳ್ಳಲು

ಎಣ್ಣೆ – 1ಟೇಬಲ್ ಚಮಚ, ತೆಂಗಿನತುರಿ – 1/2ಕಪ್‌, ಮೆಂತ್ಯ – ಚಿಟಿಕೆ, ಬ್ಯಾಡಗಿ ಮೆಣಸು – 4ರಿಂದ 5, ಹೆಚ್ಚಿದ ಈರುಳ್ಳಿ – 1, ಬೆಳ್ಳುಳ್ಳಿ ಎಸಳು – 3ರಿಂದ 4, ಕೊತ್ತಂಬರಿ ಬೀಜ – 1ಟೀ ಚಮಚ, ಜೀರಿಗೆ – 1ಟೀ ಚಮಚ, ಕರಿಮೆಣಸು – 1ಟೀ ಚಮಚ, ಹುಣಸೆಹಣ್ಣು – ಚಿಕ್ಕ ಉಂಡೆ

ಒಗ್ಗರಣೆ:

ಎಣ್ಣೆ – 2ಟೇಬಲ್ ಚಮಚ

ಸಿಗಡಿ – ತೊಳೆದು ಸ್ವಚ್ಛಗೊಳಿಸಿದ್ದು – 1/2 ಕೆ.ಜಿ.

ಮಧ್ಯಮ ಗಾತ್ರ ಟೊಮೆಟೊ – 1

ಶುಂಠಿ – 1/2ಇಂಚು

ಹಸಿಮೆಣಸು – 1ರಿಂದ2 ಮಧ್ಯ ಸೀಳಿದ್ದು

ಹೆಚ್ಚಿದ ಈರುಳ್ಳಿ – 1

ಕೆಂಪುಮೆಣಸಿನ ಪುಡಿ – 1ಟೀ ಚಮಚ

ಉ‍ಪ್ಪು – ರುಚಿಗೆ

ನೀರು – ಅಗತ್ಯವಿದ್ದಷ್ಟು

ತಯಾರಿಸುವ ವಿಧಾನ: ಮೇಲೆ ಹೇಳಿದಂತೆ ಸಿಗಡಿ, ನಿಂಬೆರಸ, ಅರಿಶಿಣ, ಉಪ್ಪು – ಇಷ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣದ ಮಾಡಿ ಒಂದು ಪಾತ್ರೆಯಲ್ಲಿ 15 ರಿಂದ 20 ನಿಮಿಷ ಇಡಿ. ನಂತರ ಕಡಾಯಿ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ. ಅದಕ್ಕೆ ರುಬ್ಬಿಕೊಳ್ಳಲು ತಿಳಿಸಿದ ಎಲ್ಲಾ ಮಿಶ್ರಣವನ್ನು ಸೇರಿಸಿ 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ಪಲ್ಪ ನೀರು ಸೇರಿಸಿ ಈ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಈಗ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾದ ಮೇಲೆ ಈರುಳ್ಳಿ, ಶುಂಠಿ, ಕರಿಬೇವಿನ ಎಲೆ ಮತ್ತು ಹಸಿಮೆಣಸಿನಕಾಯಿ ಹಾಕಿ ಫ್ರೈ ಆದ ಮೇಲೆ ಕೆಂಪುಮೆಣಸು ಹಾಕಿ ಸೌಟು ಆಡಿಸಿ. ಅದಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣ ಸೇರಿಸಿ. ಈ ಮಿಶ್ರಣ ಸ್ವಲ್ಪ ಕುದಿಸಿದ ಮೇಲೆ ತೆಳುವಾದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ. ನಂತರ ಮೊದಲೇ ಮಿಶ್ರ ಮಾಡಿ ಇರಿಸಿಕೊಂಡ ಸಿಗಡಿಯನ್ನು ಹಾಕಿ, ಈಗ ರುಚಿಗೆ ಬೇಕೆನಿಸುವಷ್ಟು ಉಪ್ಪು ಸೇರಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry