7

ಕುಕ್ಕೆ: ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ

Published:
Updated:
ಕುಕ್ಕೆ: ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಶುಕ್ರವಾರ ಬ್ರಹ್ಮರಥೋತ್ಸವವು ವೈಭವದಿಂದ ನಡೆಯಿತು. ನಾಡಿನ ವಿವಿಧೆಡೆಗಳಿಂದ  ಭಕ್ತರು ಪಾಲ್ಗೊಂಡಿದ್ದರು.

ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಲ್ಲಕ್ಕಿ ಉತ್ಸವ ನೆರವೇರಿತು.  ಬೆಳಿಗ್ಗೆ ರಥೋತ್ಸವದ ನೆರವೇರಿತು. ವಾದ್ಯಮೇಳ, ಅಲಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು ಬ್ರಹ್ಮರಥೋತ್ಸವ, ಮಹಾ ಮಂಗಳಾರತಿ ನೆರವೇರಿತು.

ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ಅರ್ಚಕರು ರಥದಿಂದ ಭಕ್ತರತ್ತ ಎಸೆದರು. ಭಕ್ತ ಜನರ ಜಯಘೋಷದೊಂದಿಗೆ  ಮಧ್ಯಾಹ್ನ 346 ಮಂದಿ ಭಕ್ತರು ಎಡೆಸ್ನಾನ ಸೇವೆ ನಡೆಸಿದರು. ಸುಬ್ರಹ್ಮಣ್ಯ ದೇವರ ಆವಭೃತೋತ್ಸವ ಮತ್ತು ನೌಕಾವಿಹಾರ ಕುಮಾರಧಾರ ನದಿಯಲ್ಲಿ ಶನಿವಾರ ನಡೆಯಲಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry