7

ಹುತ್ತಕ್ಕೆ ಕೋಳಿ ರಕ್ತ ನೈವೇದ್ಯ

Published:
Updated:
ಹುತ್ತಕ್ಕೆ ಕೋಳಿ ರಕ್ತ ನೈವೇದ್ಯ

ಚಾಮರಾಜನಗರ: ನಾಗರ ಪಂಚಮಿ, ಷಷ್ಠಿ ದಿನದಂದು ಹುತ್ತಕ್ಕೆ ಹಾಲು, ತುಪ್ಪ ಎರೆದು ಪೂಜೆ ಸಲ್ಲಿಸು­ವುದು ವಾಡಿಕೆ. ಆದರೆ, ಜಿಲ್ಲೆಯಲ್ಲಿ ಹುತ್ತಕ್ಕೆ ನಾಟಿ ಕೋಳಿಯ ಬಿಸಿ ರಕ್ತದ ನೈವೇದ್ಯ ಅರ್ಪಿಸಿ ‘ತನಿ ಹಬ್ಬ’ ಆಚರಿಸಲಾಯಿತು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶುಕ್ರ­ವಾರ ‘ತನಿ ಹಬ್ಬ’ದ ಸಡಗರ ಕಂಡುಬಂತು. ಹೊಸಬಟ್ಟೆ ಧರಿಸಿದ್ದ ಮಕ್ಕಳು, ಮಹಿಳೆ ಯರು ಬೆಳಿಗ್ಗೆಯೇ ಹೊಲಕ್ಕೆ ಪೂಜಾ ಸಾಮಾಗ್ರಿಗಳೊಂದಿಗೆ ನಾಟಿಕೋಳಿ ಹಾಗೂ ಮೊಟ್ಟೆ ಕೊಂಡೊಯ್ದು, ಹುತ್ತಕ್ಕೆ ಸಾಂಪ್ರದಾಯಿಕ­ವಾಗಿ ಪೂಜೆ ಸಲ್ಲಿಸಿ ನಮಸ್ಕರಿಸಿದರು. ಬಳಿಕ, ಕೋಳಿಯ ಕತ್ತು ಕೊಯ್ದು ರಕ್ತವನ್ನು ಹುತ್ತದ ಕೋವಿಗಳಿಗೆ ಬಿಟ್ಟರು. ನಂತರ ಮೊಟ್ಟೆ ಮತ್ತು ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಪುಟ್ಟದಾದ ‘ನಾಗರಹೆಡೆ’ ಆಭರಣವನ್ನು ಕೋವಿನಲ್ಲಿ ಹಾಕಿದರು.

‘ಜಮೀನುಗಳಲ್ಲಿ ನಾಗರಹಾವು ಕಾಣಿಸಿ­ಕೊಳ್ಳು­ವುದು ಸಾಮಾನ್ಯ. ಷಷ್ಠಿ ಯಂದು ಹುತ್ತಕ್ಕೆ ಕೋಳಿ ಬಲಿ ನೀಡಿದರೆ ನಾಗರಹಾವು ಕಾಣಿಸಿ­ಕೊಳ್ಳು­ವುದಿಲ್ಲ. ಇಲ್ಲದಿದ್ದರೆ ಹಾವು ಕಾಣಿಸಿಕೊಂಡು ನಾಗ­ದೋಷ ಕಾಡುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮೀಣ­ ಭಾಗಗಳಲ್ಲಿದೆ’ ಎಂದು ಸ್ಥಳೀಯರು ತಿಳಿಸಿದರು. ಕೋಳಿ ಬಲಿ ನೀಡದ ಜನರು ಹುತ್ತಕ್ಕೆ ಬಾಳೆ­ಹಣ್ಣು, ಹಾಲು- ಸಕ್ಕರೆಯ ನೈವೇದ್ಯ ಅರ್ಪಿಸುವ ಮೂಲಕ ತನಿ ಹಬ್ಬ ಆಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry