ಎಸ್ಸಿ ಪ್ರಮಾಣ ಪತ್ರಕ್ಕಾಗಿ ಮುಂದುವರಿದ ಧರಣಿ

7

ಎಸ್ಸಿ ಪ್ರಮಾಣ ಪತ್ರಕ್ಕಾಗಿ ಮುಂದುವರಿದ ಧರಣಿ

Published:
Updated:

ರಾಣೆಬೆನ್ನೂರು: ‘ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು’ ಎಂದು ಒತ್ತಾಯಿಸಿ ನಗರದ ತಹಶೀಲ್ದಾರ್‌ ಕಚೇರಿ ಎದುರು ನಡೆದ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

ಬೇಡ ಜಂಗಮ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಡಿ.ಹಿರೇಮಠ ಮಾತನಾಡಿ, ತಾಲ್ಲೂಕಿನಾದ್ಯಂತ ಬೇಡ ಜಂಗಮ ಸಮಾಜದವರು ಸುಮಾರು 25 ಸಾವಿರಕ್ಕೂ ಹೆಚ್ಚಿದ್ದಾರೆ. ಅವರೆಲ್ಲ ಸಂಘಟಿತರಾಗಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.

ರಾಜ್ಯ ಯುವ ಘಟಕದ ಅಧ್ಯಕ್ಷ ನಾಗರಾಜ ಹನಗೋಡಿಮಠ ಮಾತನಾಡಿ, ಬೇಡ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಮುಖಂಡರಾದ ಮಂಜುನಾಥ ಗೌಡಶಿವಣ್ಣವರ, ಎನ್.ಎಂ.ಕಮದೋಡ, ಹೇಮನಗೌಡ ಪಾಟೀಲ, ಫಕ್ಕೀರಯ್ಯ ಸಾಲಿಮಠ, ಪುಟ್ಟಯ್ಯ ಹಾವೇರಿಮಠ, ಗಂಗಾಧರಯ್ಯ ರುದ್ರದೇವರಮಠ, ಸಂಗನಬಸಯ್ಯ, ಕೆ.ಎಸ್‌.ಭರಮನಗೌಡ್ರ, ಚನ್ನಯ್ಯ ಕಾಳಮ್ಮನವರ, ಕಲ್ಲಯ್ಯ ಮೂಲಿಮಠ, ಎಂ.ಪಿ.ಶಿವಕುಮಾರ, ವಿಶ್ವಾರಾಧ್ಯ ಅಜ್ಜೇವಡಿಮಠ, ಹಾವೇರಿ ಜಿಲ್ಲಾ ಬೇಡ ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮಠಪತಿ, ಸುಮಾ ಹಿರೇಮಠ, ಚನ್ನಮ್ಮ ಗುರುಪಾದೇವರಮಠ, ರಾಜೇಂದ್ರಸ್ವಾಮಿ ಹಿರೇಮಠ, ಸುಭಾಸಗೌಡ ಪಾಟೀಲ, ಕರಬಸಯ್ಯ ಹಿರೇಮಠ, ಷಡಕ್ಷರಯ್ಯ ರಾಚಪ್ಪನವರ, ಕರಬಸನಗೌಡ ಹಳೇಗೌಡ್ರ ಹಾಗೂ ರಾಚಯ್ಯ ಅಗಡಿ, ಸಿ.ಎಂ.ಕುಂದಾಪುರ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry