6

ಚಂಪಾಷಷ್ಠಿ ಹಬ್ಬ: ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಭಕ್ತರ ದಂಡು

Published:
Updated:
ಚಂಪಾಷಷ್ಠಿ ಹಬ್ಬ: ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಭಕ್ತರ ದಂಡು

ಹೊನ್ನಾವರ: ತಾಲ್ಲೂಕಿನ ಮುಗ್ವಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನಡೆದ ಚಂಪಾಷಷ್ಠಿ ಹಬ್ಬದ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ದೇವಸ್ಥಾನದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ದೇವಸ್ಥಾನದ ಆವಾರದಲ್ಲಿ ಬೆಳಗಿನಿಂದಲೇ ನೆರೆದ ಭಕ್ತರು ದಂಡು ಸಂಜೆಯವರೆಗೂ ಮುಂದುವರಿಯಿತು. ನವದಂಪತಿಗಳು ಸೇರಿದಂತೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕ್ಷೇತ್ರದ ವ್ಯಾಪ್ತಿಯ ಶ್ರೀಗಣಪತಿ ದೇವರು ಹಾಗೂ ನಾಗಮೂರ್ತಿಗಳಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವರ ದರ್ಶನ ಹಾಗೂ ವಿವಿಧ ಪೂಜಾ ಸೇವೆಗಳಿಗಾಗಿ ಊರಿನ ಜನರ ಸಹಕಾರದೊಂದಿಗೆ ದೇವಸ್ಥಾನದ ಸಮಿತಿಯ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಂಪ್ರದಾಯಿಕ ವಿಧಿ–ವಿಧಾನಗಳನ್ವಯ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಂಡು ದೇವರಿಗೆ ಅರ್ಪಿಸಲಾದ ಸುಟ್ಟೇವು, ಬಾಳೆಹಣ್ಣು,  ಪಂಚಕಜ್ಜಾಯ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry