7

ಮಾವುತನ ಮೇಲೆ ಸಾಕಾನೆ ದಾಳಿ

Published:
Updated:

ಕುಶಾಲನಗರ: ಸಮೀಪದ ಆನೆಕಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಾಕಾನೆಯೊಂದು ಮಾವುತನ ಮೇಲೆ ದಾಳಿ ನಡೆಸಿದ್ದು ಮಾವುತನ ಸ್ಥಿತಿ ಗಂಭೀರವಾಗಿದೆ. ದುಬಾರೆ ಸಾಕಾನೆ ಶಿಬಿರದ ಮಾವುತ ಮಣಿ ಗಾಯಗೊಂಡವರು.

ಬೆಳಿಗ್ಗೆ 11ರ ಸುಮಾರಿಗೆ ‘ಮಯೂರ’ ಹೆಸರಿನ ಸಾಕಾನೆಯನ್ನು ಹೇರೂರು ಕಾಡಿಗೆ ಕರೆದೊಯ್ಯುವ ವೇಳೆ ಆನೆಯ ಬೆನ್ನು ಬಿಸಿಯಾಗಿದೆ. ಮಾವುತ ಪಕ್ಕದಲ್ಲಿದ್ದ ಮರವನ್ನೇರಿ ಆನೆಗೆ ವಿಶ್ರಾಂತಿ ನೀಡಲು ಮುಂದಾಗಿದ್ದಾರೆ. ಆಗ, ಕಾಲುಜಾರಿ ಮರದಿಂದ ಬಿದ್ದ ಕಾರಣ ಗಾಬರಿಗೊಂಡ ಆನೆಯು ದಾಳಿ ನಡೆಸಿದೆ. ಸುಮಾರು 100 ಮೀಟರ್‌ ಎಳೆದೊಯ್ದು ಎಸೆದಿದೆ.

ಮಾವುತನ ಸೊಂಟ, ಎಡಕಾಲಿನ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿದೆ. ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry