7

ಚಂಪಾರಿಂದ ಚುನಾವಣಾ ಪ್ರಚಾರ: ಜೋಶಿ ಟೀಕೆ

Published:
Updated:
ಚಂಪಾರಿಂದ ಚುನಾವಣಾ ಪ್ರಚಾರ: ಜೋಶಿ ಟೀಕೆ

ಹುಬ್ಬಳ್ಳಿ: ‘ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂದ್ರಶೇಖರ ಪಾಟೀಲ ಅವರು ಮಾಡಿದ ಅಧ್ಯಕ್ಷೀಯ ಭಾಷಣ ಚುನಾವಣಾ ಪ್ರಚಾರದಂತೆ ಇದೆ’ ಎಂದು ಸಂಸದ ಪ್ರಹ್ಲಾದ ಜೋಶಿ ಶನಿವಾರ ಇಲ್ಲಿ ಟೀಕಿಸಿದರು.

‘ರಾಜಕೀಯ ಪಕ್ಷವೊಂದಕ್ಕೆ ಮತ ನೀಡಬೇಕೆಂದು ಹೇಳುವ ಮೂಲಕ ಪಕ್ಷದ ವಕ್ತಾರರಂತೆ ವರ್ತಿಸಿರುವುದು ಚಂಪಾ ಅವರಿಗೆ ಶೋಭೆ ತರುವಂತಹದಲ್ಲ’ ಎಂದು ಅವರು ಆಕ್ಷೇಪಿಸಿದ್ದಾರೆ.

‘ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಚಂಪಾ ದುರುಪಯೋಗಪಡಿಸಿಕೊಂಡು, ಸಮ್ಮೇಳನದ ಘನತೆಗೆ ಕುಂದುಂಟು ಮಾಡಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry