6

ಸರಳ ರೀತಿಯಲ್ಲಿ ಹೆಗ್ಗಡೆ ಜನ್ಮ ದಿನ ಆಚರಣೆ

Published:
Updated:

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆಯನ್ನು ಶನಿವಾರ ಸರಳವಾಗಿ ಇಲ್ಲಿ ಆಚರಿಸಲಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಅಲೋಶೀಯಸ್ ಪಾವ್ಲ್ ಡಿ'ಸೋಜ  ಹೆಗ್ಗಡೆ ಬೀಡಿಗೆ ಬಂದು ಹೆಗ್ಗಡೆಯವರ ಬಹುಮುಖಿ ಸಮಾಜ ಸೇವಾ ಕಾರ್ಯಗಳನ್ನು ಶ್ಲಾಘಿಸಿ ಜನ್ಮ ದಿನದ ಶುಭಾಶಯ ಸಲ್ಲಿಸಿದರು.

ಮಡಂತ್ಯಾರು ಚರ್ಚ್‌ನ ಧರ್ಮಗುರು ಬಾಸಿಲ್ ವಾಸ್, ಉಜಿರೆ ಸಂತ ಅಂತೋನಿ ಚರ್ಚ್‌ನ ಧರ್ಮಗುರು ಜೋಸೆಫ್ ಮಸ್ಕರೇನ್ಹಸ್, ಬೆಳ್ತಂಗಡಿ ಚರ್ಚ್‌ನ ಧರ್ಮಗುರು ಬೊನವಿಂಚರ್ ನಜರೆತ್, ಉಜಿರೆ ಅನುಗ್ರಹ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಫರ್ನಾಂಡಿಸ್, ಸಿಸ್ಟರ್ ಡೋರಾ ಉಪಸ್ಥಿತರಿದ್ದರು.

ದೇವಳದ ನೌಕರರು, ಭಕ್ತರು, ಅಭಿಮಾನಿಗಳು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ನಮನಗಳೊಂದಿಗೆ ಶುಭಾಶಯ ಅರ್ಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಮೂಡುಬಿದಿರೆಯ ದಿನೇಶ್ ಕುಮಾರ್ ಆನಡ್ಕ, ಪಾದೂರು ಸುದರ್ಶನ ಇಂದ್ರ ಶುಭಾಶಯ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry