ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ವಿದ್ಯಾರ್ಥಿಗಳ ಭಾವನಾತ್ಮಕ ಸ್ಪರ್ಶ

Last Updated 26 ನವೆಂಬರ್ 2017, 6:46 IST
ಅಕ್ಷರ ಗಾತ್ರ

ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿಸಲು, ಭಾವನಾತ್ಮಕ ಸ್ಪರ್ಶ ನೀಡಲು ಹಳೆಯ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಈ ಕಾಲೇಜಿನಲ್ಲಿ ಓದಿ ವಿಶ್ವದ ಹಲವೆಡೆ ನೆಲೆಸಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಅಪರೂಪದ ಸಂವಹನ ಕಾರ್ಯಕ್ರಮಕ್ಕೆ ಸಹ್ಯಾದ್ರಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಈಗಾಗಲೇ ಚಾಲನೆ ನೀಡಿದೆ.

ಇಲ್ಲಿ ಓದಿದ ಹಲವರು ವಿಶ್ವದಾದ್ಯಂತ ಜನಮನ್ನಣೆ ಗಳಿಸಿದ್ದಾರೆ. ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕವಿ, ಲೇಖಕರು, ಉಪನ್ಯಾಸಕರು, ರಾಜಕಾರಣ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆಗ ಛಾಪು ಮೂಡಿಸಿದ್ದಾರೆ. ಈ ಎಲ್ಲ ಹಿರಿಯ ವಿದ್ಯಾರ್ಥಿಗಳನ್ನೂ ಒಂದೆಡೆ ಸೇರಿಸಲಾಗುತ್ತಿದೆ. ಅವರಿಗಾಗಿಯೇ ಡಿ.10ರಂದು ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ನೋಂದಣಿಗೆ ನ. 30 ಕೊನೆ ದಿನ: ಸಹ್ಯಾದ್ರಿ ಕಾಲೇಜಿನ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಸೇರಿದಂತೆ ಯಾವುದೇ ವಿಭಾಗದಲ್ಲಿ ಓದಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ನ.30ರ ಒಳಗೆ ತಮ್ಮ ಹೆಸರು ನೋಂದಾಯಿಸಲು ಪ್ರಸನ್ನ ಮೊಬೈಲ್‌: 94498 30333, ಶ್ರುತಿ ಕೀರ್ತಿ: 94480 91817, ಕೃಷ್ಣಮೂರ್ತಿ: 98860 33922, ಗುರುಮೂರ್ತಿ–94481 54365 ಅವರನ್ನು ಸಂಪರ್ಕಿಸಬಹುದು.

ಸ್ಮರಣ ಸಂಚಿಕೆ: ಸಹ್ಯಾದ್ರಿ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ ಸ್ಮರಣ ಸಂಚಿಕೆ ಹೊರತರುತ್ತಿದೆ. ಆಸಕ್ತರು ನ. 30ರ ಒಳಗೆ ತಮ್ಮ ಕಾಲೇಜು ದಿನಗಳ ಅನುಭವ ಅಥವಾ ಮಾಹಿತಿ ಲೇಖನ ರೂಪದಲ್ಲಿ ಕಳುಹಿಸಬಹುದು.

ವಿವಿಧ ಸ್ಪರ್ಧೆ: ಡಿ. 10ರಂದು ಬೆಳಿಗ್ಗೆ 8ರಿಂದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. 21ರಿಂದ 35, 36ರಿಂದ 50 ಹಾಗೂ 51ವರ್ಷ ಮೇಲ್ಪಟ್ಟ ಮೂರು ವಿಭಾಗಗಳಲ್ಲಿ ಭಾವಗೀತೆ, ಜಾನಪದಗೀತೆ ಹಾಗೂ ಕನ್ನಡ ಭಾಷೆಯ ಏಕಪಾತ್ರಭಿನಯ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆ ನಡೆಯಲಿವೆ.

ಸನ್ಮಾನ: ಅಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕಾಲೇಜಿನಲ್ಲಿ ಓದಿರುವ 75 ವರ್ಷ ಮೇಲ್ಪಟ್ಟ ಹಿರಿಯರನ್ನು ಸನ್ಮಾನಿಸಲಾಗುತ್ತಿದೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ಯಾರ್ಥಿಗಳಾದ ಕೊಣಂದೂರು ಲಿಂಗಪ್ಪ, ಕೆ.ಟಿ. ಗಂಗಾಧರ್, ಶಿವಮೊಗ್ಗ ಸುಬ್ಬಣ್ಣ, ಕಡಿದಾಳು ಶಾಮಣ್ಣ, ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಮಂಜುನಾಥ್ ಭಂಡಾರಿ, ಎಂ.ಬಿ. ಭಾನುಪ್ರಕಾಶ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಒಗ್ಗೂಡಿಸಲು ಆ್ಯಪ್ಕೂಟ್ ಜಾಲ: ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲು ಆ್ಯಪ್ಕೂಟ್ ಸಮುದಾಯ ರಚಿಸಲಾಗಿದೆ. www.appkut.com/community/sahyadri ಯುಆರ್‌ಎಲ್‌ ಮೂಲಕ ಈ ಜಾಲ ಸೇರಬಹುದು. ಅಲ್ಲದೆ ಹಳೆ ವಿದ್ಯಾರ್ಥಿಗಳು ತಮ್ಮ ಇಮೇಲ್ ಐಡಿಗಳನ್ನು sahyadricollegealumni@gmail.comಗೆ ಅಥವಾ ವ್ಯಾಟ್ಸಪ್‌ಗೆ 94837 78002ಗೆ ಕಳುಹಿಸಬಹುದು.

ಹಳೆಯ ವಿದ್ಯಾರ್ಥಿಗಳ ಸಂಘ ರಚನೆ
ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಆಯ್ಕೆಯಾಗಿದ್ದಾರೆ. ಮೂರೂ ವಿಭಾಗದ ಪ್ರಾಂಶುಪಾಲರಾದ ಶಶಿರೇಖಾ, ಪಾಂಡುರಂಗ, ವಾಗ್ದೇವಿ (ಗೌರವಾಧ್ಯಕ್ಷರು), ಉಮೇಶ್‌ಶಾಸ್ತ್ರಿ, ರಮೇಶ್‌ (ಉಪಾಧ್ಯಕ್ಷರು), ಜೇಸುದಾಸ್, ಕೆ. ರಂಗನಾಥ್ (ಕಾರ್ಯದರ್ಶಿಗಳು), ಎನ್‌. ಮಂಜುನಾಥ್ (ಪ್ರಚಾರ ಸಮಿತಿ ಸಂಚಾಲಕರು), ಡಾ.ಶ್ರುತಿಕೀರ್ತಿ (ಸಾಂಸ್ಕೃತಿಕ ಸಂಚಾಲಕರು) ಪ್ರೊ.ಚಂದ್ರಪ್ಪ (ಕ್ರೀಡಾ ) ಡಾ.ಪ್ರಸನ್ನಕುಮಾರ್ (ಸಂಘಟನಾ ಕಾರ್ಯದರ್ಶಿ), ರುದ್ರೇಗೌಡ, ರಾಜೇಶ್ವರಿ, ಜ್ಞಾನೇಶ್, ರವೀಶ್, ಲೋಕೇಶ್ (ಸಂಚಾಲಕರು) ಆಯ್ಕೆಯಾಗಿದ್ದಾರೆ.

* * 

ಕಾಲೇಜಿನಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಅಮೃತ ಮಹೋತ್ಸವ ವೇದಿಕೆ ಒದಗಿಸಿದೆ. ಎಲ್ಲ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಸಲು ಸಂಘ ಶ್ರಮಿಸುತ್ತದೆ.– ಎಂ. ಗುರುಮೂರ್ತಿ,
ಹಳೇ ವಿದ್ಯಾರ್ಥಿಗಳ ಸಂಘ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT