6

ಮುಂದಿನ ಸಮ್ಮೇಳನದ ಆತಿಥ್ಯ ಬನವಾಸಿಗೆ ನೀಡಿ

Published:
Updated:
ಮುಂದಿನ ಸಮ್ಮೇಳನದ ಆತಿಥ್ಯ ಬನವಾಸಿಗೆ ನೀಡಿ

ಕಾರವಾರ: ಮುಂದಿನ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಆದಿಕವಿ ಪಂಪನ ನಾಡು ಉತ್ತರ ಕನ್ನಡ ಜಿಲ್ಲೆಯ ಬನವಾಸಿಗೆ ನೀಡಬೇಕು ಎಂದು ಕಸಾಪ ಜಿಲ್ಲಾ ಘಟಕವು ಶುಕ್ರವಾರ ಮೈಸೂರಿನಲ್ಲಿ ಆಗ್ರಹಿಸಿತು.

‘ಕಳೆದ ವರ್ಷ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಬನವಾಸಿಯಲ್ಲಿ ಸಮ್ಮೇಳನ ನಡೆಸಲು ಅವಕಾಶ ಕೊಡುವಂತೆ ಕೋರಲಾಗಿತ್ತು. ಆದರೆ ಅವಕಾಶ ಲಭ್ಯವಾಗಿರಲಿಲ್ಲ. ಈ ಸಲವಾದರೂ ಆತಿಥ್ಯ ವಹಿಸಿಕೊಳ್ಳಲು ಅವಕಾಶ ಮಾಡಿಕೊಬೇಕು ಎಂದರು.

ಕೇಂದ್ರ ಕಸಾಪ ಕಾರ್ಯಕಾರಿ ಸಮಿತಿಯು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಒತ್ತಾಯಿಸಿದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಯಲ್ಲಾಪುರ, ನಾಗರಾಜ ಹರಪನಹಳ್ಳಿ, ಉಪೇಂದ್ರ ಘೋರ್ಪಡೆ ಹಳಿಯಾಳ, ನಾಗೇಶ ಪಾಲನಕರ ಮುಂಡಗೋಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry