ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕಿಯಾಗಲು ಏನು ಮಾಡಬೇಕು?

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

1. ನಾನು ಇತ್ತೀಚೆಗೆ ಎಂ.ಕಾಂ. ಮುಗಿಸಿದೆ. ನನಗೆ ಸರ್ಕಾರಿ ಪ್ರಾಧ್ಯಾಪಕಿ ಆಗುವ ಆಸೆ. ನಾನೇನು ಮಾಡಬೇಕು? ಸಲಹೆ ನೀಡಿ.

ಹೆಸರು, ಊರು ಬೇಡ

–ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ, ನಾನೂ ಪಾಠ ಹೇಳಿಕೊಡಬೇಕು ಅನ್ನುವ ಹಂಬಲ ಹೆಚ್ಚಾಗಿ ಕಾಣುತ್ತಿಲ್ಲ. ನಿಮಗೆ ಈ ಆಸೆ ಇರುವುದು ಕೇಳಿ ಸಂತೋಷವಾಯಿತು. ‘ಗುರು’ವಿಗೆ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಅಗ್ರಸ್ಥಾನವಿದೆ.

ನಿಮ್ಮ ವಿಷಯದಲ್ಲಿ ವಿವರವಾದ ಜ್ಞಾನವಿದ್ದು, ಅಪ್‌ಡೇಟ್ ಮಾಡಿಕೊಳ್ಳುವ ಸರಳತೆ ಇದ್ದಲ್ಲಿ, ತಾಳ್ಮೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಕಲೆ, ನಿರ್ಗಗಳವಾಗಿ ಮಾತನಾಡುವ ಚತುರತೆ ಇದ್ದಲ್ಲಿ, ಖಂಡಿತ ನೀವು ಪ್ರಾಧ್ಯಾಪಕರಾಗಿ. ಯುಜಿಸಿ (ಯೂನಿರ್ವಸಿಟಿ ಗ್ರ್ಯಾಂಟ್ ಕಮಿಷನ್‌) ಇವರ ಪರವಾಗಿ ಸಿಬಿಎಸ್‌ಸಿ ನ್ಯಾಷನಲ್ ಎಲಿಜಬಿಲಿಟಿ ಟೆಸ್ಟ್ ಅನ್ನು ಸರ್ಕಾರಿ ಅಥವಾ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಅಥವಾ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಹುದ್ದೆಗಳಿಗೆ ನಡೆಸುತ್ತಾರೆ.

ಸಿಬಿಎಸ್‌ಸಿಯವರು 83 ವಿಷಯದಲ್ಲಿ, 89 ಸೆಂಟರ್‌ಗಳಲ್ಲಿ ಯುಜಿಸಿ–ಎನ್‌ಇಟಿ ಪರೀಕ್ಷೆಯನ್ನು ನಡೆಸುತ್ತಾರೆ. ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಇದ್ದಲ್ಲಿ ನೀವು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಅಪ್ಲಿಕೇಶನ್‌ ಅನ್ನು ಅನ್‌ಲೈನ್ ಮೂಲಕ ಭರ್ತಿ ಮಾಡಿ ಕಳಿಸಬೇಕು.

www.cbsenet.nic.in ಪರೀಕ್ಷೆಯಲ್ಲಿ 3 ಪೇಪರ್  ಇರುತ್ತದೆ.

ಪೇಪರ್‌ 1 – ನೂರು ಅಂಕಗಳು, 60 ಪ್ರಶ್ನೆಗಳು (50 ಉತ್ತರಿಸಬೇಕು) 1–1/2 ಗಂಟೆ ಅವಧಿ.

ಪೇಪರ್ 2 – 100 ಅಂಕಗಳು, 50 ಪ್ರಶ್ನೆಗಳು, 1–1/2 ಗಂಟೆ.

ಪೇಪರ್ 3– 150 ಅಂಕಗಳು, 75 ಪ್ರಶ್ನೆಗಳು– 2–1/2 ಗಂಟೆ.

ಯುಜಿಸಿ – ಎನ್‌ಇಟಿ ಪುಸ್ತಕಗಳು, ಮಾದರಿ ಪತ್ರಿಕೆಗಳು, ತಯಾರಿ ಟಿಪ್ಸ್, ಸಿಲೆಬಸ್‌ – ಎಲ್ಲವೂ ವೆಬ್‌ಸೈಟ್‌ನಲ್ಲಿ ದೊರಕುತ್ತವೆ.

**

2. ನನ್ನ ವಿದ್ಯಾರ್ಥಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ. ಈಗ ಅವನು ಕೆಎಸ್‌ಆರ್‌ಪಿಯಲ್ಲಿ ಕಾನ್ಸ್‌ಟೆಬಲ್ ಆಗಿ ಆಯ್ಕೆ ಆಗಿದ್ದಾನೆ ಮತ್ತು ಅವನು ಅದಕ್ಕೆ ಸೇರ ಬಯಸುತ್ತಿದ್ದಾನೆ. ಜೊತೆಗೆ ಅವನಿಗೆ ಬಿಎಸ್ಸಿಯನ್ನು ಮುಂದುವರೆಸುವ ಆಸೆ ಇದೆ. ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಕೇವಲ 3ನೇ ವರ್ಷದ (5ಮತ್ತು 6ನೇ ಸೆಮಿಸ್ಟರ್‌) ಡಿಗ್ರಿಗೆ ಸೇರುವ ಅವಕಾಶ ಇದೆಯೇ? ಯಾವುದಾದರೂ ಕರೆಸ್ಪಾಡೆಂಟ್ಸ್ ಕೋರ್ಸ್ ಇದೆಯೇ? ಅಥವಾ ಕರೆಸ್ಪಾಂಡೆಟ್ಸ್ ಡಿಗ್ರಿ ಮಾಡಿದರೆ ಮೊದಲ ವರ್ಷದಿಂದಲೇ ಮಾಡಬೇಕೆ?

–ರಾಜೇಶ್ ಜಾಧವ್‌, ಊರು ಬೇಡ

ಅವರು ಸಿಕ್ಕಿರುವ ಕೆಲಸಕ್ಕೆ ಸೇರಲಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅವರನ್ನು ಹಾಜರಾತಿ ಬಗ್ಗೆ ವಿಚಾರಿಸಿ, ಪರೀಕ್ಷೆಗೆ ಬಂದು ಬರೆಯಲು ಅವಕಾಶ ಇದೆಯಾ ಕೇಳಿ.

ಯಾವುದೇ ಕರೆಸ್ಪಾಂಡೆಂಟ್ಸ್‌ ಕೋರ್ಸ್‌ನಲ್ಲಿ 1 ವರ್ಷ ಮಾತ್ರ ಬರೆಯಲು ಅವಕಾಶವಿರುವ ಸಂಭವ ಕಷ್ಟ.

**

3. ನಾನು ಬಿಎ (ಸೈಕಾಲಜಿ) ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಸೈಕಾಲಜಿಯಲ್ಲಿ ಎಂಎಸ್ಸಿ ಮಾಡಬೇಕೆಂದುಕೊಂಡಿದ್ದೇನೆ. ನನಗೆ ಈ ಕೋರ್ಸ್‌ ಹಾಗೂ ಫೀಲ್ಡ್‌ನ ಬಗ್ಗೆ ಕೆಲವು ಸಲಹೆಗಳು ಬೇಕಿವೆ. ಸೈಕಾಲಜಿಯಲ್ಲಿ ಯಾವ ಫೀಲ್ಡ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನಾನು ಕ್ರಿಮಿನಲ್ ಸೈಕಾಲಜಿಯ ಬಗ್ಗೆ ಕೇಳಿದ್ದೇನೆ. ನನಗೆ ಸಲಹೆ ನೀಡಿ.

–ಜಾಹ್ನವಿ, ಊರು ಬೇಡ

ಮನಃಶಾಸ್ತ್ರ (ಸೈಕಾಲಜಿ) ಜ್ಞಾನವನ್ನು ನಾವು ಅನೇಕ ಭಿನ್ನ ವಿಭಾಗದಲ್ಲಿ ಅಳವಡಿಸಬಹುದು. ಜೀವನದ ಹೆಜ್ಜೆ ಹೆಜ್ಜೆಯಲ್ಲೂ ನಮ್ಮ ನಡೆವಳಿಕೆಗಳನ್ನು ಜಾಗೃತಗೊಳಿಸುವ ಜ್ಞಾನ ಮನಃಶಾಸ್ತ್ರ. ಯಾರಾದರು ಒಂದು ಭಿನ್ನ ರೀತಿಯಲ್ಲಿ ಮಾತನಾಡಿದರೆ ಅಥವಾ ಅವರ ವರ್ತನೆ ಭಿನ್ನವಾಗಿದ್ದರೆ, ಮನಃಶಾಸ್ತ್ರಜ್ಞರು ಈ ರೀತಿ ಯಾಕಿರಬಹುದು ಎನ್ನುವುದನ್ನು ಯೋಚಿಸುತ್ತಾರೆ. ಮನಃಶಾಸ್ತ್ರ ಹಲವಾರು ಕಾರ್ಯಕ್ಷೇತ್ರಗಳನ್ನು ಒಳಗೊಂಡಿದೆ. ಮಾನಸಿಕ ಅಸ್ವಸ್ಥತೆ (ಕ್ಲಿನಿಕಲ್ ಸೈಕಾಲಜಿ), ಕೈಗಾರಿಕೆ ಉದ್ಯಮ (ಇಂಡಸ್ಟ್ರಿಯಲ್ ಸೈಕಲಾಜಿ), ಶಿಕ್ಷಣಕ್ಷೇತ್ರ (ಎಜುಕೇಷನ್ ಸೈಕಾಲಜಿ), ಸಮಸ್ಯೆಯ ಬಗ್ಗೆ ಪರಿಣತರ ಸಲಹೆ  (ಕೌನ್ಸಿಲಿಂಗ್ ಸೈಕಾಲಜಿ), ಮನಸ್ಸು ಮತ್ತು ಮೆದುಳು (ಪ್ರೋಟಲ್ ಸೈಕಲಾಜಿ), ಮನಸ್ಸಿನಲ್ಲಿ ಸಂಭವಿಸುವ ಭಾವನೆಗಳು, ಯಾವುದೇ ಪ್ರಚೋದನೆ ಇಲ್ಲದಿರುವಾಗ (ಪ್ಯಾರಾ ಸೈಕಾಲಜಿ), ಜೀವವಿಜ್ಞಾನ (ಬಯೊಲಾಜಿಕಲ್ ಸೈಕಾಲಜಿ) ಮೆದುಳಿನ ರಚನೆ ಮತ್ತು ವರ್ತನೆ (ನ್ಯೂರೋ ಸೈಕಾಲಜಿ) ಮೆದುಳಿನ ಅರ್ಹತೆ– ನೆನಪು ಭಾಷೆ, ಸಮಸ್ಯೆಗೆ ಪರಿಹಾರ (ಕಾಗ್ನೇಟಿವ್ ಸೈಕಾಲಜಿ), ಪರ್ಸನಾಲಿಟಿ ಸೈಕಾಲಜಿ, ಅಪ್ಲೈಡ್ ಸೈಕಾಲಜಿ, ಸೋಷಿಯಲ್ ಸೈಕಾಲಜಿ, ಫೊರೆನ್ಸಿಕ್ ಸೈಕಾಲಜಿ, ಏಕ್ಸ್‌ರಿಮೆಂಟಲ್‌ ಸೈಕಾಲಜಿ – ಹೀಗೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಬಹುದು.

+2 ನಂತರ ಸೈಕಾಲಜಿಯನ್ನು ಒಂದು ವಿಷಯವಾಗಿ 3ವರ್ಷದ ಅಧ್ಯಯನ ಮಾಡಬೇಕು. ನಂತರ ಎಂಎ/ ಎಂಎಸ್ಸಿ ಇನ್ ಸೈಕಾಲಜಿ 2ವರ್ಷ ಅಧ್ಯಯನ, ಮುಂದೆ ಪಿಎಚ್‌ಡಿ ಕೂಡ ಹಲವಾರು ಕ್ಷೇತ್ರದಲ್ಲಿ ಮಾಡಬಹುದು.

ಭಾರತದ ಪ್ರತಿ ರಾಜ್ಯದಲ್ಲೂ ವಿಶ್ವವಿದ್ಯಾಲಯಗಳಲ್ಲಿ ಎಂಎ (ಸೈಕಾಲಜಿ)  ಕೋರ್ಸ್‌ಗಳು ಇದೆ.

ಕೆಲವು ಎಂಎ (ಸೈಕಾಲಜಿ), ಎಂಎಸ್ಸಿ ಯೂನಿರ್ವಸಿಟಿಗಳು

1. ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು

2. ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು

3. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

4. ಎಂ.ಎಸ್. ವಿಶ್ವವಿದ್ಯಾಲಯ, ಬರೋಡ, ಗುಜರಾತ್

5. ಬಾಂಬೆ ವಿಶ್ವವಿದ್ಯಾಲಯ, ಮುಂಬೈ, ಮಹಾರಾಷ್ಟ್ರ

6. ಮದ್ರಾಸ್ ವಿಶ್ವವಿದ್ಯಾಲಯ, ಚೆನೈ, ತಮಿಳುನಾಡು ಇನ್ನೂ ಅನೇಕ........

ಇದರಲ್ಲಿ ಡಾಕ್ಟ್‌ರೇಟ್ ಪದವಿಯನ್ನು ಕೂಡ ಪಡೆಯಬಹುದು.

ನೀವು ಆಸಕ್ತಿ ತೋರಿರುವುದು ಕ್ರಿಮಿನಲ್ ಸೈಕಾಲಜಿಯಲ್ಲಿ. ಇಲ್ಲಿ ನೀವು ಒಬ್ಬ ತಪ್ಪಿತಸ್ಥ (ಕ್ರಿಮಿನಲ್‌) ಮನಸ್ಸಿನಲ್ಲಿ ತಪ್ಪು ಏಕೆ ಮಾಡಿದ, ಅವನ ಪರಿಸರದ ಕಾರಣ, ಅವನ ಬೆಳವಣಿಗೆಯ ಸಂದರ್ಭ, ಇದನ್ನೆಲ್ಲಾ ಓದುತ್ತೀರಿ.

ಪ್ರೊ. ಲಿಯೋನೆಲ್ ಹಾರ್ವಡ್‌ ಅನ್ನುವ ಬ್ರಿಟಿಷ್ ಕ್ರಿಮಿನಲ್ ಸೈಕಾಲಜಿಸ್ಟ್ ಹೇಳುತ್ತಾರೆ, ಕ್ರಿಮಿನಲ್ ಪ್ರೋಸಿಡಿಂಗ್‌ನಲ್ಲಿ ಕ್ಲಿನಿಕಲ್ ಏಕ್ಸ್‌ಪರಿಮೆಂಟಲ್, ಆರ್ಕ್ಚುರಿಯಲ್ ಮತ್ತು ಅಡ್‌ವೈಸರಿ ಪಾತ್ರದಲ್ಲಿ ಕೆಲಸ ಮಾಡಬೇಕೆಂದು ಎಂಎ/ಎಂಎಸ್ಸಿಯ ನಂತರ ಕ್ರಿಮಿನಲ್‌ ಫೊರೆನ್ಸಿಕ್‌ ಸೈಕಾಲಜಿ ‌ಕೋರ್ಸ್‌ಗಳನ್ನು ಹೊರದೇಶಗಳಲ್ಲೂ ಮಾಡಬಹುದು. ಭಾರತದಲ್ಲಿ ಪೂನಾ ವಿಶ್ವವಿದ್ಯಾಲಯ ಪಿಜಿ ಡಿಪ್ಲೊಮಾ ಇನ್ ಕ್ಲಿನಿಕಲ್ ಅಂಡ್ ಫೊರೆನ್ಸಿಕ್ ಸೈಕಾಲಜಿ ಕೋರ್ಸ್ ನೀಡುತ್ತದೆ. ಅರ್ಹತೆ ಎಂಎ ಇನ್ ಕ್ಲಿನಿಕಲ್ ಸೈಕಾಲಜಿ ಪ್ರಿಫರ್ಡ್‌ ಅಥವಾ ಎಂ/ಎಂಎಸ್ಸಿ ಇನ್ ಸೈಕಲಾಜಿ, ಎಂಎಸ್‌ಡ್ಲ್ಯೂ ವಿತ್ ಶೇ.50 ಅಂಕ ಮತ್ತು ಸಂದರ್ಶನ. ಕೆಲವು ವಿಶ್ವವಿದ್ಯಾಲಯಗಳು ಕ್ರಿಮಿನಲ್ ಸೈಕಾಲಜಿ ಮತ್ತು ಫೊರೆನ್ಸಿಕ್ ಸೈಕಾಲಜಿ ಕೋರ್ಸ್‌ಗಳನ್ನು ನೀಡುವುದರ ಮಾಹಿತಿ:

1. university of Pune, Maharashtra

2. Loknayak Jayaprakash Narayan National Institute of Criminology and Forensic Science, New Delhi

3. Gujrat Forensic Science University, Gandhinagar, Gujrat

4. Kurukshetra University, Haryana

5. CMJ University,  Haryana

ಮತ್ತು ಇನ್ನೂ ಅನೇಕ...

ಯಾವ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇದೆಯೋ ಅದನ್ನೇ ಆರಿಸಿ.

**

4. ನಾನು ದ್ವಿತೀಯ ಬಿಎ ಓದುತ್ತಿದ್ದೇನೆ. ನಮ್ಮದು ಕೃಷಿ ಕುಟುಂಬ. ನಾನು ಮತ್ತು ನನ್ನ ತಾಯಿ ಇಬ್ಬರೇ ಇರುವುದು. ನಾನು ನನ್ನ ಪದವಿ ಮುಗಿಸಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಉದ್ಯೋಗ ಪಡೆದುಕೊಳ್ಳಬೇಕೆಂದು ಯೋಚಿಸುತ್ತಿದ್ದೇನೆ. ನನ್ನ ಗುರಿ ಐಪಿಎಸ್‌ ಮಾಡಬೇಕು ಎಂದು. ನಾನು ಸಂಪೂರ್ಣ ಕನ್ನಡ ಮಾಧ್ಯಮದಲ್ಲೇ ಓದಿದ್ದು. ನಾನು ಇದಕ್ಕೆ ಅರ್ಹನೇ?

5. ನಾನು ಬಿಎಸ್ಸಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಐ.ಪಿ.ಎಸ್. ಮಾಡಬೇಕೆಂಬ ಆಸೆ ಇದೆ. ನಾನು ಈಗಿನಿಂದಲೇ ಹೇಗೆ ಓದಬೇಕು? ನಂತರ ಏನು ಮಾಡಬೇಕು ಎಂದು ಸಲಹೆ ನೀಡಿ.

–ಹೇಮಂತ್, ಬೆಂಗಳೂರು

ಐ.ಪಿ.ಎಸ್‌. ಪರೀಕ್ಷೆಯ ವಿವರವನ್ನು ನಾವು ಅಕ್ಟೋಬರ್‌ 16ರ ಪ್ರಕಟಣೆಯಲ್ಲಿ ತಿಳಿಸಿದ್ದೇವೆ. ನೀವು ಶಿಕ್ಷಣ ವಿಭಾಗವನ್ನು ಶ್ರದ್ದೆಯಿಂದ ಓದಬೇಕು.

ಫಿಸಿಕಲ್ ಕ್ರೈಟಿರಿಯಾ: ಪುರುಷರಿಗೆ ಕನಿಷ್ಠ ಎತ್ತರ 165 ಸೆಂ.ಮೀ., ಮಹಿಳೆಯರಿಗೆ 150 ಸೆಂ.ಮೀ.

ಎದೆಯ ಸುತ್ತಳತೆ, ಕಣ್ಣಿನ ವಿವರಗಳು – ಇವುಗಳನ್ನು ನೀವು ವೆಬ್‌ಸೈಟ್‌ನಿಂದ ತಿಳಿಯಿರಿ.

ರಾಷ್ಟ್ರೀಯತೆ: ಭಾರತ

ವಯೋಮಿತಿ: ಕನಿಷ್ಠ 21ವರ್ಷ.

ಕನಿಷ್ಠ 32 ವರ್ಷ ಆಗಸ್ಟ್‌ 1ರಿಂದ.

ನಂಬರ್ ಆಫ್ ಅಟೆಂಪ್ಟ್‌: ಜನರಲ್ ಕ್ಯಾಟಗರಿ 6

ಎಸ್‌ಸಿ, ಎಸ್‌ಟಿ ನಿರ್ಬಂಧವಿಲ್ಲ.

ಒಬಿಸಿ ಕೆಟಗರಿಯವರು 7 ಬಾರಿ ಪ್ರಯತ್ನಿಸಬಹುದು.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಬಿಎ, ಬಿಕಾಂ, ಬಿಸಿಎ, ಬಿಇ, ಎಂಬಿಬಿಎಸ್‌, ಬಿಡಿಎಸ್‌ ಇತ್ಯಾದಿ. ಅರ್ಜಿ ಹಾಕುವುದು, ಪರೀಕ್ಷೆಯ ಸಿಲೇಬಸ್, ಮಾದರಿ ಪ್ರಶ್ನಪತ್ರಿಕೆಗಳು, ತಯಾರಿ ಪುಸ್ತಕಗಳು ಇವುಗಳನ್ನು ವೆಬ್‌ಸೈಟ್‌ನಿಂದ ಪಡೆಯಿರಿ.

ಸಂಪರ್ಕಿಸಿ: www.careerindia.com/upse/reference books.

ನೀವು ಕನ್ನಡದಲ್ಲೇ ಓದಿರುವುದರಿಂದ ನಿಮಗೆ ಕಷ್ಟವಾಗುತ್ತದೆ. ಮೊದಲೇ ಪ್ರಕಟಿಸಿದ ವಿವರದಂತೆ ನಾಗರಿಕ ಸೇವಾ ಪರೀಕ್ಷೆಯ ಪ್ರಕಟಣೆಯನ್ನು ಗಮನಿಸಿ.

ಸಿವಿಲ್ ಸರ್ಮಿಸ್, ಪ್ರಿಲಿಮಿನರಿ ಸಿವಿಲ್ ಸರ್ವಿಸ್ ಮೈನ್, ಇಂಟರ್‌ವ್ಯೂ ಈ ರೀತಿ 3 ಹಂತದಲ್ಲಿ ನಡೆಸುತ್ತಾರೆ. ಪರಿಶ್ರಮ ಜಿತವಾಗಿ ಕೂತು ಓದುವುದು, ಅಭ್ಯಾಸ ಮಾಡಬೇಕು.

ಎಂಪ್ಲಾಯಿಮೆಂಟ್ ನ್ಯೂಸ್ ತರಿಸಿದರೆ, ಅದರಲ್ಲಿ ಸಂಪೂರ್ಣ ಮಾಹಿತಿ ನಿಮಗೆ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT