7

ಬಗೆಬಗೆ ಪೋರ್ಕ್ ಖಾದ್ಯಗಳು

Published:
Updated:
ಬಗೆಬಗೆ ಪೋರ್ಕ್ ಖಾದ್ಯಗಳು

ಪೋರ್ಕ್ ಕೈಮಾ ಫ್ರೈ

ಬೇಕಾಗುವ ಸಾಮಗ್ರಿ: ಸಣ್ಣಗೆ ಕೈಮಾ ಮಾಡಿದ ಹಂದಿಮಾಂಸ ಅರ್ಧ ಕೆ.ಜಿ. (ಚರ್ಬಿ ಹೊರತು ಪಡಿಸಿ), ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ಕೊತ್ತಂಬರಿಸೊಪ್ಪು ಸ್ವಲ್ಪ, ಪುದೀನ ಸ್ವಲ್ಪ, ಕರಿಬೇವು ಒಂದು ಕಡ್ಡಿ, ಖಾರದಪುಡಿ ಒಂದು ಚಮಚ, ಅರಿಶಿಣಪುಡಿ ಸ್ವಲ್ಪ, ಕಾಳುಮೆಣಸಿನಪುಡಿ ಸ್ವಲ್ಪ, ಈರುಳ್ಳಿ ಎರಡು, ಟೊಮೆಟೊ ಒಂದು, ಗರಂ ಮಸಾಲೆ ಒಂದು ಚಮಚ, ಮಟನ್ ಮಸಾಲೆ ಸ್ವಲ್ಪ, ಹಸಿ ಮೆಣಸಿನಕಾಯಿ ನಾಲ್ಕು, ನಿಂಬೆಹಣ್ಣು ಒಂದು, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ಕೊತ್ತಂಬರಿ, ಪುದೀನ ಸೊಪ್ಪು,   ಹಂದಿಮಾಂಸ ಕೈಮಾ, ಖಾರದಪುಡಿ, ಅರಿಶಿನಪುಡಿ, ಕಾಳುಮೆಣಸುಪುಡಿ, ಗರಂ ಮಸಾಲೆ ಮತ್ತು ಉಪ್ಪನ್ನು ಹಾಕಿ ಸ್ವಲ್ಪ ಹುರಿಯಿರಿ. ನಂತರ ಸ್ವಲ್ಪ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಷಲ್ ಹಾಕಿಸಿ. ಸ್ವಲ್ಪ ಸಮಯದ ನಂತದ ಕುಕ್ಕರ್ ಮುಚ್ಚಳ ತೆಗೆದು ನೀರು ಕಡಿಮೆಯಾಗುವ ತನಕ ತಿರುವುತ್ತಾ ಬೇಯಿಸಿ. ಬೆಂದ ನಂತರ ಉಣಬಡಿಸುವ ಬೌಲ್‍ಗೆ ಹಾಕಿ ನಿಂಬೆರಸವನ್ನು ಬೆರೆಸಿ, ಬೇಕೆಂದರೆ ಕತ್ತರಿಸಿದ ಕೊತ್ತಂಬರಿಸೊಪ್ಪು ಉದುರಿಸಿಕೊಳ್ಳಿ.

**

ಪೋರ್ಕ್ ಗಾರ್ಲಿಕ್ ಫ್ರೈ

ಬೇಕಾಗುವ ಸಾಮಗ್ರಿ: ಹಂದಿಮಾಂಸ ಒಂದು ಕೆ.ಜಿ (ಮಾಂಸ ಮತ್ತು ಚರ್ಬಿ), ಈರುಳ್ಳಿ ಒಂದು, ಟೊಮೆಟೊ ಒಂದು, ಹಸಿ ಮೆಣಸಿನಕಾಯಿ ನಾಲ್ಕು, ಬೆಳ್ಳುಳ್ಳಿ ಒಂದು ಉಂಡೆ, ಶುಂಠಿ ಪೇಸ್ಟ್ ಒಂದು ಚಮಚ, ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು, ಪುದೀನ ಸ್ವಲ್ಪ, ಗರಂ ಮಸಾಲೆ ಒಂದು ಚಮಚ, ಕಾಳುಮೆಣಸು ಇಪ್ಪತ್ತು, ಖಾರದ ಪುಡಿ ಒಂದು ಚಮಚ, ಧನಿಯಾ ಪುಡಿ ಎರಡು ಚಮಚ, ಅರಿಶಿಣ ಪುಡಿ ಸ್ವಲ್ಪ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಪುದೀನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ರುಬ್ಬಿಟ್ಟುಕೊಳ್ಳಿ. ತೊಳೆದ ಹಂದಿ ಮಾಂಸಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಹಾಕಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ರುಬ್ಬಿದ ಮಿಶ್ರಣ ಹಾಕಿ. ಹಸಿ ವಾಸನೆ ಹೋಗುವ ತನಕ ಬೇಯಿಸಿ. ನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂದ ಹಂದಿ ಮಾಂಸ ಹಾಕಿ ಸ್ವಲ್ಪ ಅರಿಶಿಣಪುಡಿ, ಉಪ್ಪು, ಗರಂ ಮಸಾಲೆ, ಧನಿಯಾಪುಡಿ, ಖಾರದಪುಡಿ ಹಾಕಿ ಬೇಯಿಸಿ ಮುಕ್ಕಾಲು ಭಾಗ ಬೆಂದ ನಂತರ ಜಜ್ಜಿದ ಬೆಳ್ಳುಳ್ಳಿ, ಜಜ್ಜಿದ ಕಾಳುಮೆಣಸು ಹಾಕಿ ಬೇಯಿಸಿ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

**

ಚಿಲ್ಲಿ ಜಿಂಜರ್ ಪೋರ್ಕ್ ಫ್ರೈ

ಬೇಕಾಗುವ ಸಾಮಗ್ರಿ: ಹಂದಿ ಮಾಂಸ ಅರ್ಧ ಕೆ.ಜಿ (ಮಾಂಸ ಮತ್ತು ಚರ್ಬಿ), ಈರುಳ್ಳಿ 1, ಹಸಿ ಮೆಣಸಿನಕಾಯಿ 10, ಬೆಳ್ಳುಳ್ಳಿ 1 ಉಂಡೆ, ಶುಂಠಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ಪೆಪ್ಪರ್ ಪುಡಿ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಪುದೀನ ಕತ್ತರಿಸಿಟ್ಟುಕೊಳ್ಳಿ. ಚೆನ್ನಾಗಿ ತೊಳೆದ ಹಂದಿಮಾಂಸಕ್ಕೆ ನೀರನ್ನು ಹಾಕದೆ ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಹಾಕಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಹಸಿಮೆಣಸಿನಕಾಯಿ, ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ ನಂತರ ಶುಂಠಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಬೇಯಿಸಿಕೊಳ್ಳಿ. ನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂದ ಹಂದಿ ಮಾಂಸ ಹಾಕಿ ಸ್ವಲ್ಪ ಉಪ್ಪು, ಕಾಳುಮೆಣಸು ಪುಡಿ ಹಾಕಿ ಚೆನ್ನಾಗಿ ಬೇಯಿಸಿದ ನಂತರ ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಉದುರಿಸಿ. ನಂತರ ಸ್ವಲ್ಪ ಬೇಯಿಸಿ.

**

ಪೋರ್ಕ್ ಗಾರ್ಲಿಕ್ ಫ್ರೈ

ಬೇಕಾಗುವ ಸಾಮಗ್ರಿ: ಹಂದಿಮಾಂಸ ಒಂದು ಕೆ.ಜಿ (ಮಾಂಸ ಮತ್ತು ಚರ್ಬಿ), ಈರುಳ್ಳಿ ಒಂದು, ಟೊಮೆಟೊ ಒಂದು, ಹಸಿ ಮೆಣಸಿನಕಾಯಿ ನಾಲ್ಕು, ಬೆಳ್ಳುಳ್ಳಿ ಒಂದು ಉಂಡೆ, ಶುಂಠಿ ಪೇಸ್ಟ್ ಒಂದು ಚಮಚ, ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು, ಪುದೀನ ಸ್ವಲ್ಪ, ಗರಂ ಮಸಾಲೆ ಒಂದು ಚಮಚ, ಕಾಳುಮೆಣಸು ಇಪ್ಪತ್ತು, ಖಾರದ ಪುಡಿ ಒಂದು ಚಮಚ, ಧನಿಯಾ ಪುಡಿ ಎರಡು ಚಮಚ, ಅರಿಶಿಣ ಪುಡಿ ಸ್ವಲ್ಪ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಪುದೀನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ರುಬ್ಬಿಟ್ಟುಕೊಳ್ಳಿ. ತೊಳೆದ ಹಂದಿ ಮಾಂಸಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಹಾಕಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ರುಬ್ಬಿದ ಮಿಶ್ರಣ ಹಾಕಿ. ಹಸಿ ವಾಸನೆ ಹೋಗುವ ತನಕ ಬೇಯಿಸಿ. ನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂದ ಹಂದಿ ಮಾಂಸ ಹಾಕಿ ಸ್ವಲ್ಪ ಅರಿಶಿಣಪುಡಿ, ಉಪ್ಪು, ಗರಂ ಮಸಾಲೆ, ಧನಿಯಾಪುಡಿ, ಖಾರದಪುಡಿ ಹಾಕಿ ಬೇಯಿಸಿ ಮುಕ್ಕಾಲು ಭಾಗ ಬೆಂದ ನಂತರ ಜಜ್ಜಿದ ಬೆಳ್ಳುಳ್ಳಿ, ಜಜ್ಜಿದ ಕಾಳುಮೆಣಸು ಹಾಕಿ ಬೇಯಿಸಿ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

**

ಕರಿದ ಪೋರ್ಕ್ ಕಬಾಬ್

ಬೇಕಾಗುವ ಸಾಮಗ್ರಿ: ಹಂದಿಮಾಂಸ ಅರ್ಧ ಕೆ.ಜಿ. (ಚರ್ಬಿ ಹೊರತು ಪಡಿಸಿ), ಕಡಲೆಹಿಟ್ಟು ಮೂರು ಚಮಚ, ಕೆಂಪು ಖಾರದಪುಡಿ ಮೂರು ಚಮಚ, ಮೈದಾಹಿಟ್ಟು ಒಂದು ಚಮಚ, ಗರಂಮಸಾಲೆ ಸ್ವಲ್ಪ, ಕಬಾಬ್‌ ಬಣ್ಣ (ಬೇಕೆಂದರೆ), ಮೆಕ್ಕೆಜೋಳದಹಿಟ್ಟು (ಕಾರ್ನ್‌ಫ್ಲೋರ್) ಎರಡು ಚಮಚ, ಶುಂಠಿ ಪೇಸ್ಟ್ ಒಂದು ಚಮಚ, ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ವಿನಿಗರ್ ಎರಡು ಚಮಚ, ಕೋಳಿಮೊಟ್ಟೆ ಒಂದು, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ, ನಿಂಬೆಹಣ್ಣು ಒಂದು.

ವಿಧಾನ: ಚೆನ್ನಾಗಿ ತೊಳೆದ ಹಂದಿಮಾಂಸಕ್ಕೆ ಕಡಲೆಹಿಟ್ಟು, ಮೈದಾಹಿಟ್ಟು, ಕೆಂಪು ಖಾರದಪುಡಿ, ಮೆಕ್ಕೆಜೋಳದಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ, ವಿನಿಗರ್, ಕೋಳಿಮೊಟ್ಟೆ, ಬೇಕೆಂದರೆ ಕೇಸರಿ ಬಣ್ಣ, ಉಪ್ಪನ್ನು ಹಾಕಿ ಕಲಸಿ ಅರ್ಧ ಗಂಟೆ ರೆಫ್ರಿಜರೇಟರ್‌ನಲ್ಲಿ ಇಡಿ.

ಕಾದ ಎಣ್ಣೆಗೆ ಒಂದು ಹಂದಿ ಮಾಂಸದ ತುಂಡನ್ನು ಹಾಕಿ ಹದ ಉರಿಯಲ್ಲಿ ಕರಿದು ರುಚಿ ನೋಡಿ ಕಡಿಮೆ ಇದ್ದದ್ದನ್ನು ನ್ನು ಸೇರಿಸಿ. ಉಳಿದ ಹಂದಿ ಮಾಂಸವನ್ನು ಕರಿಯಿರಿ. ನಂತರ ಪ್ಲೇಟ್‍ಗೆ ಈರುಳ್ಳಿ ಕತ್ತರಿಸಿಟ್ಟು ನಿಂಬೆಹಣ್ಣಿನ ರಸವನ್ನು ಹಾಕಿ ತಿನ್ನಲು ಕೊಡಿ (ಎಳೆಯ ಫಾರ್ಮ್ ಹಂದಿ ಮಾಂಸ ಸೂಕ್ತ ಮತ್ತು ತುಂಬಾ ಸಮಯ ಕರಿಯಬೇಕು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry