ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯೇ ಧರ್ಮ: ಸ್ವಾಮೀಜಿ

Last Updated 27 ನವೆಂಬರ್ 2017, 4:57 IST
ಅಕ್ಷರ ಗಾತ್ರ

ವಿಟ್ಲ: ‘ಮನುಷ್ಯ ಮಾನವೀಯತೆಯ ಗುಣ ಬೆಳೆಸಿಕೊಳ್ಳುವುದೇ ಧರ್ಮವಾಗಿದೆ’ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಕಾನತ್ತಡ್ಕ ಸ್ಪೋರ್ಟಿಂಗ್ ಬಾಯ್ಸ್ ಆರ್ಟ್ಸ್‌ ಮತ್ತು ಸ್ಪೋರ್ಟ್ಸ್‌ ಕ್ಲಬ್, ಫ್ರೆಂಡ್ಸ್ ಕಾನತ್ತಡ್ಕ ಗಲ್ಫ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಕಾನತ್ತಡ್ಕ ಶ್ರೀ ಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ  ಶನಿವಾರ ನಡೆದ ಸೌಹಾರ್ದ ಸಮ್ಮೇಳನ, ಸನ್ಮಾನ ಹಾಗೂ ಕ್ರೀಡೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

’ಕನ್ನಡ ಭಾಷೆಯನ್ನು ಮರೆತ ಪರಿಣಾಮ ಹಾಗೂ ಆಂಗ್ಲ ಭಾಷೆ ವ್ಯಾಮೋಹದಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕನ್ನಡ ಸಾಹಿತ್ಯವೂ ನಮ್ಮನ್ನು ಒಳ್ಳೆತನಕ್ಕೆ ಕೊಂಡೊಯ್ಯುತ್ತಿದೆ ' ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ‘ಎಲ್ಲರ ಮನುಸ್ಸು ಮಗುವಿನ ಮನುಸ್ಸು ಆದಾಗ ಸಮಾಜದಲ್ಲಿ ನೆಮ್ಮದಿಯಿಂದ ಬದುಕಬಹುದು. ದ್ವೇಷದಿಂದ ಏನು ಸಾಧಿಸಲು ಸಾಧ್ಯವಿಲ್ಲ’ ಎಂದರು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ‘ಕ್ರೀಡೆಗಳ ಮೂಲಕ ಎಲ್ಲರನ್ನೂ ಒಟ್ಟುಗೂಡಿಸಲು ಸಾಧ್ಯ’ ಎಂದು ತಿಳಿಸಿದರು.

ತುಳು ಚಿತ್ರನಟ ಅರವಿಂದ ಬೋಳಾರ್, ಶಿಕ್ಷಣ  ಸಾಧನೆಕ ಹರೇಕಳ ಹಾಜಬ್ಬ, ಮಂಗಳೂರು ಎಸ್‌ಐ ಚಂದ್ರಶೇಖರಯ್ಯ, ಕಡಬ ಎಸ್‌ಐ ಪ್ರಕಾಶ್ ದೇವಾಡಿಗ, ಪ್ರಾಚ್ಯವಸ್ತು ಸಂಗ್ರಹಗಾರ ಯಾಸೀರ್ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ಅಳಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರ್ ಭಟ್ ಕಾನ ಅಧ್ಯಕ್ಷತೆ ವಹಿಸಿದ್ದರು.

ಅಳಿಕೆ ಧರ್ಮಗುರು ಅಬ್ದುಲ್ ಸಲಾಂ ಮದನಿ, ವಿಟ್ಲ ಶೋಕಮಾತಾ ಇಗರ್ಜಿಯ ಧರ್ಮಗುರು ಎರಿಕ್ ಕ್ರಾಸ್ತ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ನಟಿ ದಿಶಾ ದಿನಕರ್, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವ ಮಾವೆ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸಿಫ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ,  ಮುಖ್ಯಶಿಕ್ಷಕಿ ಜೆಸಿಂತಾ ಸೋಪಿಯಾ ಮಸ್ಕರೇನಸ್, ಕೇಪು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಮಾವೆ ದಿನಕರ್ ಭಟ್, ಆರ್.ಕೆ ಅಬ್ದುಲ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ ಅಶ್ರಫ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶಿಕ್ಷಕ ವಿಶ್ವನಾಥ ಭಟ್, ಐತಪ್ಪ ನಾಯ್ಕ, ಮೊಹಿದು ಕುಂಞ ಪಾದೆಕಲ್ಲು  ಉಪಸ್ಥಿತರಿದ್ದರು.

ಎಂ ಫ್ರೆಂಡ್ಸ್‌ನ ರಶೀದ್ ವಿಟ್ಲ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ನಿರೂಪಿಸಿದರು. ಕಾನತ್ತಡ್ಕ ಸ್ಪೋರ್ಟಿಂಗ್ ಬಾಯ್ಸ್ ಆರ್ಟ್ಸ್‌ ಮತ್ತು ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಅನಸ್ ಕಾನತ್ತಡ್ಕ ವಂದಿಸಿದರು. ಸಂಶುದ್ದೀನ್ ಅಜ್ಜಿನಡ್ಕ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT