7

‘ಕನ್ನಡ ಅನ್ನದ ಭಾಷೆಯಾಗಲಿ’

Published:
Updated:

ಮಾಗಡಿ: ಕನ್ನಡ ಭಾಷೆ ನಾಡಿನ ಯುವ ಜನರಿಗೆ ಅನ್ನದ ಭಾಷೆಯಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ ತಿಳಿಸಿದರು. ತಿರುಮಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವೆಂಬರ್‌ನಲ್ಲಿ ಮಾತ್ರ ರಾಜ್ಯೋತ್ಸವ ಆಚರಿಸದೆ. ಇಡೀ ವರ್ಷ ಕನ್ನಡ ನುಡಿ ಸೇವೆಗೆ ಕಂಕಣಬದ್ಧರಾಗಬೇಕಿದೆ. ಮಾಗಡಿಯಿಂದ ಎ.ಮಂಜುನಾಥ ಅವರನ್ನು ಆಯ್ಕೆ ಮಾಡಿ, ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಮಾತನಾಡಿ, ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ರಂಗನಾಥಸ್ವಾಮಿ ಸನ್ನಿಧಿಯಿಂದ ಆಡಿದ ಮಾತಿಗೆ ಮಹತ್ವವಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾಲ್ಲೂಕಿಗೆ ಹೆಚ್ಚಿನ ಅನುದಾನ ನೀಡಿದ್ದರು ಎಂದರು.

ಜೆಡಿಎಸ್‌ ಮುಖಂಡರಾದ ನಂಜಯ್ಯ, ಗುಡ್ಡೇಗೌಡ, ಪಿ.ವಿ.ಸೀತಾರಾಮ್‌, ಪಿಎಸ್‌ಐಗಳಾದ ವಿಶ್ವನಾಥ, ನಟರಾಜ್‌, ತಿರುಮಲೆ ರಾಮಪ್ರಭು, ಕುದೂರು ಪುರುಷೋತ್ತಮ್‌, ನಿವೃತ್ತ ಶಿಕ್ಷಕ ಕೆಂಚನರಸಯ್ಯ ಇದ್ದರು. ತಿರುಮಲೆಯ ಯುವಕರು ಕಾರ್ಯಕ್ರಮ ಆಯೋಜಿಸಿದ್ದರು. ಲವ್‌ 2 ಕೆ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry