7

ಕಾನಾಮಡಗು ದಾಸೋಹ ಮಠ ಜಾತ್ರಾ ಮಹೋತ್ಸವ ನಾಳೆಯಿಂದ

Published:
Updated:

ಜಗಳೂರು: ತಾಲ್ಲೂಕಿನ ಅಣಬೂರು ಸಮೀಪದ ಕಾನಾಮಡಗು ದಾಸೋಹ ಮಠದ ಶರಣಾರ್ಯ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ನ.28ರಿಂದ 30ರವರೆಗೆ ನಡೆಯಲಿದೆ. ಐತಿಹಾಸಿಕ ದಾಸೋಹ ಮಠದಲ್ಲಿ ನವೆಂಬರ್‌ ಕಾರ್ತಿಕ ದೀಪೋತ್ಸವ, 29ರಂದು ಸರ್ವಧರ್ಮ ಸಾಮೂಹಿಕ ಮತ್ತು ಸಂಜೆ ಸ್ವಾಮಿಯ ರಥೋತ್ಸವ ಜರುಗಲಿದೆ.

ನವೆಂಬರ್‌ 30ರಂದು ಸಂಜೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ.ಮುಸ್ಟೂರಿನ ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನ ಹಿರಮೇಠದ ರಾಜೇಂದ್ರ ಶಿವಾಚಾರ್ಯ ಹಾಗೂ ಕೇದಾರ ಲಿಂಗ ಶಿವಾಚಾರ್ಯ ಸ್ವಾಮಿಗಳು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗ್ರಾಮದ ಕಲಾವಿದರಿಂದ ಸಾಮಾಜಿಕ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಎಂದು ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry