7

ಜಾನಪದ ಜಾತ್ರೆಗೆ ನೆಹರೂ ಮೈದಾನ ಸಜ್ಜು

Published:
Updated:
ಜಾನಪದ ಜಾತ್ರೆಗೆ ನೆಹರೂ ಮೈದಾನ ಸಜ್ಜು

ಸಾಗರ: ನೆಲದ ಸಂಸ್ಕೃತಿ ಬಿಂಬಿಸುವ ಜನಪದ ಕಲೆಗಳ ಅನಾವರಣಕ್ಕೆ ಸಾಗರ ಸಜ್ಜಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ನ.27, 28ರಂದು ಇಲ್ಲಿನ ನೆಹರೂ ಮೈದಾನದಲ್ಲಿ ಜಾನಪದ ಜಾತ್ರೆ ಏರ್ಪಡಿಸಲಾಗಿದೆ.

400ಕ್ಕೂ ಹೆಚ್ಚು ಕಲಾವಿದರು ಈಗಾಗಲೇ ಇಲ್ಲಿಗೆ ಬಂದಿದ್ದು, ನೆಹರೂ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ತಾಲೀಮು ನಡೆಸುತ್ತಿದ್ದಾರೆ. 27ರಂದು ಮಧ್ಯಾಹ್ನ 3ಕ್ಕೆ ಡಿವೈಎಸ್ಪಿ ಕಚೇರಿಯಿಂದ ನೆಹರೂ ಮೈದಾನದವರೆಗೆ ಜನಪದ ಕಲಾ ತಂಡಗಳ ಮೆರವಣಿಗೆ ಆಯೋಜಿಸಲಾಗಿದೆ.

ಜನಪದ ತಜ್ಞರಾದ ಡಾ.ಬಾನಂದೂರು ಕೆಂಪಯ್ಯ, ಡಾ.ಅಪ್ಪಗೆರೆ ತಿಮ್ಮರಾಜು ಜಾನಪದ ಜಾತ್ರೆಯ ಪ್ರಧಾನ ಸಂಚಾಲಕರಾಗಿ, ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂದು ಸಂಜೆ 5ಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜಾನಪದ ಜಾತ್ರೆ ಉದ್ಘಾಟಿಸಲಿದ್ದು, ಚಿತ್ರದುರ್ಗದ ನಿರ್ಮಲಾಬಾಯಿ ಮತ್ತು ತಂಡದವರಿಂದ ಲಂಬಾಣಿ ನೃತ್ಯ, ಮಂಡ್ಯದ ಎಸ್‌.ವಿ.ಶಾಂಭವಿ ಸ್ವಾಮಿ ಮತ್ತು ತಂಡದವರಿಂದ ಜನಪದ ನೃತ್ಯ, ಕೊಡಗು ಜಿಲ್ಲೆಯ ಗೋಪಮ್ಮ ಮತ್ತು ತಂಡದವರಿಂದ ಎರವರ ಕುಣಿತ ನಡೆಯಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪರಸಪ್ಪ ಮತ್ತು ತಂಡದವರಿಂದ ಸೋಮನ ಕುಣಿತ, ಮೈಸೂರು ಜಿಲ್ಲೆಯ ಸುನೀಲ ಮತ್ತು ತಂಡದವರಿಂದ ನಗಾರಿ, ಧಾರವಾಡದ ಸಹನಾ ಮತ್ತು ತಂಡದವರಿಂದ ಜಾನಪದ ನೃತ್ಯ, ಚಿಕ್ಕಮಗಳೂರಿನ ಪಲ್ಲವಿ ಮತ್ತು ತಂಡದವರಿಂದ ವೀರಗಾಸೆ, ಚಾಮರಾಜನಗರ ಜಿಲ್ಲೆಯ ಕೈಲಾಸಮೂರ್ತಿ ಮತ್ತು ತಂಡದವರಿಂದ ನೀಲಗಾರರ ಪದ ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹರ್ಷಾ ಮತ್ತು ತಂಡದವರಿಂದ ಹಾಗೂ ಫಣಿಯಮ್ಮ ಮತ್ತು ತಂಡದವರಿಂದ ಡೊಳ್ಳು ಕುಣಿತ, ದಕ್ಷಿಣ ಕನ್ನಡ ಜಿಲ್ಲೆಯ ಮಂಜುನಾಥ ಮತ್ತು ತಂಡದವರಿಂದ ಕಂಗೀಲು, ಉಡುಪಿ ಜಿಲ್ಲೆಯ ಎಸ್‌.ಎಸ್‌.ಪ್ರಸಾದ್ ಮತ್ತು ತಂಡದವರಿಂದ ಹುಲಿವೇಷ, ಹಾಸನ ಜಿಲ್ಲೆಯ ಕುಮಾರಯ್ಯ ಮತ್ತು ತಂಡದವರಿಂದ ಚಿಟ್ಟಿ ಮೇಳ ಏರ್ಪಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಜಗದೀಶ್‌ ಮತ್ತು ತಂಡದವರಿಂದ ತಮಟೆ ವಾದನ, ಸೊರಬದ ಅಂಬೇಡ್ಕರ್‌ ಕೋಲಾಟ ಸಂಘದಿಂದ ಕೋಲಾಟ, ಶಿವಮೊಗ್ಗದ ಅಪರ್ಣಾ ಮತ್ತು ತಂಡದವರಿಂದ ಲಂಬಾಣಿ ನೃತ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎನ್‌.ಕೆ.ಸುರೇಶ್‌ ಮತ್ತು ತಂಡದವರಿಂದ ಪಟ ಕುಣಿತ, ರಾಮನಗರದ ವೈಕುಂಠಯ್ಯ ಮತ್ತು ತಂಡದವರಿಂದ ತಮಟೆ ನಗಾರಿ ವಾದನ, ಮಾದೇಶ ಮತ್ತು ತಂಡದವರಿಂದ ಪಟ ಕುಣಿತ ನಡೆಯಲಿದೆ.

ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಮತ್ತು ತಂಡದವರಿಂದ ಗೊಂದಲಿಗರ ಮೇಳ, ಶಿವಮೊಗ್ಗ ಜಿಲ್ಲೆಯ ಗುಡ್ಡಪ್ಪ ಜೋಗಿ ಮತ್ತು ತಂಡದವರಿಂದ ಜೋಗಿಪದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕಹಲಗಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ಹನುಮಂತ ನಾಯ್ಕ ಮತ್ತು ತಂಡದವರಿಂದ ಪೂಜಾ ಕುಣಿತ, ಮೈಸೂರು ಜಿಲ್ಲೆಯ ಕಳಲೆ ಮಹದೇವ ನಾಯ್ಕ ಮತ್ತು ತಂಡದವರಿಂದ ಬೀಸು ಕಂಸಾಳೆ ಏರ್ಪಡಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅಣ್ಣಪ್ಪ ಮತ್ತು ತಂಡದವರಿಂದ ಡೊಳ್ಳು ಕುಣಿತ, ಚಾಮರಾಜನಗರ ಜಿಲ್ಲೆಯ ಬಸವರಾಜ ಮತ್ತು ತಂಡದವರಿಂದ ಗೊರವರ ನೃತ್ಯ, ಉಡುಪಿ ಜಿಲ್ಲೆಯ ಜ್ಯೋತಿ ಮತ್ತು ತಂಡದವರಿಂದ ಚೆಂಡೆ ಮೇಳ, ಮೈಸೂರು ಜಿಲ್ಲೆಯ ಮಹೇಶ್‌ ಮತ್ತು ತಂಡದವರಿಂದ ಸೋಮನ ಕುಣಿತ, ಶಿವಮೊಗ್ಗ ಜಿಲ್ಲೆಯ ಮಂಜುನಾಥ್‌ ಮತ್ತು ತಂಡದವರಿಂದ ಡೊಳ್ಳು ಕುಣಿತ, ಶಂಕರ್‌ ಮತ್ತು ತಂಡದವರಿಂದ ಪೂಜಾ ಕುಣಿತ, ಶಿಲ್ಪಾ ಆರ್‌. ಮತ್ತು ತಂಡದವರಿಂದ ಕಂಸಾಳೆ, ಸಂಕಯ್ಯ ಸುಕ್ರಗೊಂಡ ಮತ್ತು ತಂಡದವರಿಂದ ಢಕ್ಕೆ ಕುಣಿತ, ಧಾರವಾಡದ ಬಸವರಾಜ ಮೇಲಿನಮನಿ ಮತ್ತು ತಂಡದವರಿಂದ ಜಗ್ಗಲಿಗೆ, ಉಡುಪಿ ಜಿಲ್ಲೆಯ ವಿಜಯಸಿದ್ದಿ ಮತ್ತು ತಂಡದವರಿಂದ ದಮಾಮಿ ನೃತ್ಯ ಆಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry