7

ದೀವಿ ಹಲಸಿನ ರುಚಿಕರ ಅಡುಗೆಗಳು

Published:
Updated:
ದೀವಿ ಹಲಸಿನ ರುಚಿಕರ ಅಡುಗೆಗಳು

ದೀವಿ ಹಲಸು ಪಲ್ಯ

ಬೇಕಾಗುವ ವಸ್ತುಗಳು: 1 ಕಪ್ ದೀವಿ ಹಲಸಿನ ತುಂಡುಗಳು, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಕೆಂಪುಮೆಣಸಿನ ಪುಡಿ, ಅರ್ಧ ಚಮಚ ಬೆಲ್ಲದ ಪುಡಿ, 1 ಚಮಚ ತೆಂಗಿನ ತುರಿ, ಉಪ್ಪು ರುಚಿಗೆ ತಕ್ಕಷ್ಟು, 2 ಚಮಚ ಎಣ್ಣೆ, 1 ಎಸಳು ಕರಿಬೇವಿನ ಎಲೆ, ½ ಚಮಚ ಉದ್ದಿನ ಬೇಳೆ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಎಲೆ, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಸ್ವಲ್ಪ ಹುರಿದು, ದೀವಿ ಹಲಸಿನ ತುಂಡು, ಸ್ವಲ್ಪ ನೀರು, ಕೆಂಪುಮೆಣಸಿನಪುಡಿ, ಬೆಲ್ಲದ ಪುಡಿ, ಉಪ್ಪು ಸೇರಿಸಿ ಬೇಯಿಸಿ ನಂತರ ತೆಂಗಿನತುರಿ ಸೇರಿಸಿ ಸರಿಯಾಗಿ ಬೆರೆಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಪಲ್ಯ ಅನ್ನದೊಂದಿಗೆ ಸವಿಯಲು ಸಿದ್ಧ.

**

ದೀವಿ ಹಲಸು ಪೋಡಿ

ಬೇಕಾಗುವ ವಸ್ತುಗಳು:
ಸಿಪ್ಪೆ ಮತ್ತು ತಿರುಳು ತೆಗೆದು ತೆಳ್ಳಗೆ ಉದ್ದಕ್ಕೆ ತುಂಡು ಮಾಡಿದ ದೀವಿ ಹಲಸು, 1 ಕಪ್ ಕಡಲೆಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಕೆಂಪುಮೆಣಸಿನ ಪುಡಿ, ಚಿಟಕಿ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಅಕ್ಕಿಹಿಟ್ಟು, ಕಡಲೆ ಹಿಟ್ಟು, ಕೆಂಪುಮೆಣಸಿನ ಪುಡಿ, ಇಂಗು, ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಮಂದವಾಗಿ ಹಿಟ್ಟು ಕಲಸಿ. ಉದ್ದಕ್ಕೆ ತುಂಡು ಮಾಡಿದ ದೀವಿ ಹಲಸು ಕಲಸಿದ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ದೀವಿ ಹಲಸು ಪೋಡಿ ಸಂಜೆಯ ಕಾಫಿಯ ಜೊತೆ ತಿನ್ನಲು ಸಿದ್ಧ.

**

ದೀವಿ ಹಲಸು ಕೂರ್ಮ

ಬೇಕಾಗುವ ವಸ್ತುಗಳು:
1 ಕಪ್ ದೀವಿ ಹಲಸಿನ ತುಂಡುಗಳು, ½ ಕಪ್ ತೊಗರಿಬೇಳೆ, 1 ಕಪ್ ತೆಂಗಿನತುರಿ, 1 ಚಮಚ ಕೊತ್ತಂಬರಿ, 2 ಚಮಚ ಕಡ್ಲೆಬೇಳೆ, ½ ಚಮಚ ಜೀರಿಗೆ, 2 ಲವಂಗ, ¼ ಉದ್ದದ ಚಕ್ಕೆ, ಚಿಟಿಕೆ ಇಂಗು, 5-6 ಒಣಮೆಣಸು, 1 ಈರುಳ್ಳಿ, 1 ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು, 2-3 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿಸೊಪ್ಪು.

ಮಾಡುವ ವಿಧಾನ: ದೀವಿ ಹಲಸಿನ ತುಂಡುಗಳು, ತೊಗರಿ ಬೇಳೆ ಸ್ವಲ್ಪ ನೀರು ಸೇರಿಸಿ ಕುಕ್ಕರಿನಲ್ಲಿಟ್ಟು 3 ವಿಸಿಲ್ ಕೂಗಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಕಡ್ಲೆಬೇಳೆ, ಕೊತ್ತಂಬರಿ, ಜೀರಿಗೆ, ಲವಂಗ, ಇಂಗು, ಒಣಮೆಣಸು ಹಾಕಿ ಹುರಿದು, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಈರುಳ್ಳಿ, ಟೊಮೆಟೊ ಸೇರಿಸಿ ರುಬ್ಬಿ. ನಂತರ ಬೇಯಿಸಿದ ಮಿಶ್ರಣಕ್ಕೆ ರುಬ್ಬಿದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕುದಿಸಿ, ಕೊನೆಗೆ ಕೊತ್ತಂಬರಿಸೊಪ್ಪು ಸೇರಿಸಿ. ಚಪಾತಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry