ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಜನರಿಗೆ ಫ್ಲೋರೈಡ್ ನೀರೇ ಗತಿ...

Last Updated 28 ನವೆಂಬರ್ 2017, 6:47 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ನಾಗರಿಕರು ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. 23 ವಾರ್ಡ್‌ಗಳಿದ್ದು. 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ದಿನೇ ದಿನೇ ನೀರಿನ ಬೇಡಿಕೆ ಹೆಚ್ಚುತ್ತಿದೆ. ಆದರೆ ಪುರಸಭೆ ನೀರು ಪೂರೈಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ನಾಗರಿಕರು ದೂರುತ್ತಿದ್ದಾರೆ.

ನಿತ್ಯ ಪಟ್ಟಣಕ್ಕೆ 36 ಲಕ್ಷ ಲೀಟರ್ ನೀರು ಅಗತ್ಯ ಇದೆ. ಚಿತ್ರಾವತಿ ಬ್ಯಾರೇಜ್ ನಿಂದ ಶುದ್ಧೀಕರಣ ಘಟಕಕ್ಕೆ ನೀರು ಹರಿಸಿ ಅಲ್ಲಿಂದ ಪಟ್ಟಣಕ್ಕೆ ಪೂರೈಸಬೇಕು. ಆದರೆ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ದೂರು ನಾಗರಿಕರದ್ದು.

‘ಈ ವರ್ಷ ಉತ್ತಮ ಮಳೆ ಸುರಿದು ಬ್ಯಾರೇಜ್ ಭರ್ತಿಯಾಗಿದೆ. ಆದರೂ ಬ್ಯಾರೇಜ್ ನೀರನ್ನು ಕುಡಿಯಲು ಬಳಸುತ್ತಿಲ್ಲ. ಕೊಳವೆಬಾವಿಗಳ ನೀರನ್ನು ನೇರವಾಗಿ ಪೈಪ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಅಧಿಕಾರಿಗಳು ಅಸಮರ್ಥರಾದ ಕಾರಣ ಬ್ಯಾರೇಜ್‌ನಿಂದ ನಮಗೆ ನೀರು ದೊರೆಯುತ್ತಿಲ್ಲ’ ಎಂದು ಪಟ್ಟಣದವಾಸಿ ಬಿ.ಕೆ.ಗಿರೀಶ್ ಬಾಬು ದೂರುವರು.

‘ಚಿತ್ರಾವತಿ ಬ್ಯಾರೇಜ್ ತುಂಬಿ ಎರಡು ತಿಂಗಳು ಕಳೆದರೂ, ಕೊಳವೆ ಬಾವಿಯ ಫ್ಲೋರೈಡ್ ನೀರು ಸರಬರಾಜು ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಚಿತ್ರಾವತಿಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಶುದ್ಧೀಕರಣ ಘಟಕ ಸೂಕ್ತ ನಿರ್ವಹಣೆ ಇಲ್ಲದೆ ನರಳುತ್ತಿದೆ.

‘ಪಟ್ಟಣದ ಸುತ್ತಮುತ್ತ 144 ಕೊಳವೆಬಾವಿಗಳು ಕೊರೆಯಲಾಗಿದೆ. 89 ಕೊಳವೆಬಾವಿಗಳಲ್ಲಿ ನೀರು ಲಭ್ಯ ಇದ್ದು ಪೂರೈಸಲಾಗುತ್ತಿದೆ’ ಎಂದು ಪುರಸಭೆಯ ಎಂಜಿನಿಯರ್ ಚಕ್ರಪಾಣಿ ತಿಳಿಸುವರು.

‘ಪಟ್ಟಣದಲ್ಲಿ ಉತ್ತಮ ಮಳೆಯಾಗಿ ಕೆರೆ ಕುಂಟೆಗಳು ತುಂಬಿದ್ದರೂ ನೀರಿನ ಸಮಸ್ಯೆ ತಪ್ಪಿಲ್ಲ’ ಎಂದು ಕುಂಬಾರ ಪೇಟೆಯ ನಿವಾಸಿ ರಮೇಶ್ ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT