7

ದುರ್ಗಾಂಬಿಕಾ ದೇಗುಲದ ಸುತ್ತ ಅಭಿವೃದ್ಧಿ: ಶಾಮನೂರು

Published:
Updated:

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸ್ಮಾರ್ಟ್‌ಸಿಟಿ ಲಿಮಿಟೆಡ್, ಮಹಾನಗರ ಪಾಲಿಕೆ, ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿ ಆಪ್ತ ಮಾತನಾಡಿ, ‘ದೇಗುಲದ ಪ್ರದಕ್ಷಿಣಾ ಪಥಗಳ ಅಭಿವೃದ್ಧಿ, ಭಕ್ತರು ನಿಲ್ಲುವ ಸ್ಥಳ, ದೇವಸ್ಥಾನಕ್ಕೆ ತೆರಳುವ 3 ಕಡೆಗಳಲ್ಲಿ ಸ್ವಾಗತ ಗೋಪುರ ನಿರ್ಮಾಣ, ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಲಾಗುವುದು’ಎಂದರು.

ಜಾತ್ರೆ ಸಂದರ್ಭಗಳಲ್ಲಿ ತಾತ್ಕಾಲಿಕ ಮಾರಾಟ ಮಳಿಗೆ, ಹೊಂಡದ ಸರ್ಕಲ್‌ ಬಳಿಯ ಕಲ್ಯಾಣಿ ಅಭಿವೃದ್ಧಿ, ಗಡಿಯಾರ ಕಂಬದ ಸುತ್ತಲಿನ ಪ್ರದೇಶವನ್ನೂ ಅಭಿ

ವೃದ್ಧಿ ಮಾಡಲಾಗುವುದು. ಪುರಾತನ ದೇವಸ್ಥಾನದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.

ಸಭೆಯಲ್ಲಿ ಮೇಯರ್ ಅನಿತಾಬಾಯಿ ಮಾಲತೇಶ್, ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ಉಪ ಆಯುಕ್ತ ರವೀಂದ್ರ, ಸದಸ್ಯರಾದ ಅಶ್ವಿನಿ, ದಿಲ್‌ಶಾದ್ ಷೇಕ್‌ ಅಹಮದ್, ಗೋಣೆಪ್ಪ, ದೇವಸ್ಥಾನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ್, ಬಿ.ಎಚ್.ವೀರಭದ್ರಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry