ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ: ಪ್ರತಿಭಟನೆ

Last Updated 29 ನವೆಂಬರ್ 2017, 5:49 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: 2015–16 ನೇ ಸಾಲಿನಲ್ಲಿ ರೈತರಿಗೆ ನೀಡಲಾದ ಬೆಳೆ ಪರಿಹಾರದಲ್ಲಿ ತಾರತಮ್ಯವಾಗಿದ್ದು, ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಹಾಗೂ ಮುಳಸಾವಳಗಿ ಗ್ರಾಮಸ್ಥರ ಪರವಾಗಿ ಉಪತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರೈತ ಘಟಕದ ಅಧ್ಯಕ್ಷ ಉಮೇಶ ಬಿರಾದಾರ, ದೇವರ ಹಿಪ್ಪರಗಿ ಮಂಡಳದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಂಗನಗೌಡ ಬಿರಾದಾರ, ‘ಕಳೆದ ಸಾಲಿನಲ್ಲಿ ರೈತರಿಗೆ ನೀಡಿದ ಬೆಳೆ ಪರಿಹಾರ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ. ಈ ಕುರಿತು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕಾಗಿ ಗ್ರಾಮದಲ್ಲಿ ಗ್ರಾಮಸಭೆ ನಡೆಸಿ ಅರ್ಹ ರೈತ ಫಲಾನುಭವಿಗಳಿಗೆ ಬೆಳೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು. ಉಪ ತಹಶೀಲ್ದಾರ್ ಇಂದಿರಾ ಬಳಗಾನೂರ ಮನವಿ ಸ್ವೀಕರಿಸಿದರು. 

ಕರವೇ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಶ್ರೀಕಾಂತ ಭಜಂತ್ರಿ, ವಿಜಯಕುಮಾರ ತಳವಾರ, ಶರತ್ ಕುಂಬಾರ, ಲಾಲಸಾಬ್ ಮುಳಸಾವಳಗಿ, ಸಾಹೇಬಗೌಡ ಬಿರಾದಾರ, ಸಂತೋಷ ನಾಯ್ಕೋಡಿ, ಶ್ರೀಶೈಲ ಹಚ್ಚಡದ, ಸಾಬು ದ್ಯಾಬೇರಿ, ನಬಿ ಮಕಾನದಾರ, ಮೀರಾಸಾಬ್ ಮಡ್ಡಿ, ಸಂತೋಷ ಕಾಂಬಳೆ, ಚಿದಾನಂದ ಬಮ್ಮನಳ್ಳಿ, ಭೀಮನಗೌಡ ಚೌಧರಿ, ಶ್ರೀಶೈಲ ಮೆಳ್ಳಿಗೇರಿ, ಉಮೇಶ ರೋಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT