5

ಚೆಕ್‌ಡ್ಯಾಂ ನಿರ್ಮಾಣಕ್ಕೆ ಚಾಲನೆ

Published:
Updated:

ಶಿರಹಟ್ಟಿ: ‘ರೈತರ ಜಮೀನಿನ ಪಕ್ಕ ಚೆಕ್‌ ಡ್ಯಾಂ ನಿರ್ಮಾಣದಿಂದ ಅಂತರ್ಜಲ ಹೆಚ್ಚಳವಾಗುವುದರೊಂದಿಗೆ, ಕೊಳವೆಬಾವಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಿದೆ’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಹೊರವಲಯದಲ್ಲಿ ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ಚೆಕ್‌ ಡ್ಯಾಂ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ರೈತರ ಮಳೆ ಆಧಾರಿತ ಕೃಷಿ ಮೇಲೆ ಅವಲಂಬಿತರಾಗದೆ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನ ಉಳಿತಾಯದ ಉಪಾಯಗಳನ್ನು ಕಂಡುಕೊಳ್ಳಬೇಕು. ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಜಿತ್ ಪಿಡ್ಡಿ, ವಸಂತ ಜಗ್ಗಲರ, ಎಲ್.ಡಿ. ಪಾಟೀಲ, ಮಹಾವೀರ ಮಂಠಗಣಿ, ಪರಸಪ್ಪ ಮಾಗಡಿ, ಸಕ್ರಪ್ಪ ಹೊಸೂರ, ನಿಂಗಪ್ಪ ವಡ್ಡಟ್ಟಿ, ಹನುಮಂತರಾಯ ಸೋಗಿಹಾಳ, ಸುರೇಶ ಕಲ್ಲವಡ್ಡರ, ಶಿವಣ್ಣ ಜಕ್ಕಲಿ, ಮಂಜಪ್ಪ ಕರೆಕೆಂಚಕ್ಕನವರ, ಬಾಬು ಹಂಶಿ, ಪಕ್ಕಣ್ಣ ಕುಸ್ತಿ, ಕೊಟ್ರಪ್ಪ ಹಮ್ಮಗಿ, ವಿರೂಪಾಕ್ಷಪ್ಪ ಮಾಗಡಿ, ಪರಶುರಾಮ ಕಲಾಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry