ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ, ಗೋವಿನಜೋಳ ಆವಕ ಹೆಚ್ಚಳ

Last Updated 29 ನವೆಂಬರ್ 2017, 9:08 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 5,500 ಹತ್ತಿ ಅಂಡಿಗೆ ಹಾಗೂ 4 ಸಾವಿರಕ್ಕೂ (ನೆಹರೂ ಮಾರುಕಟ್ಟೆ ಸೇರಿ) ಅಧಿಕ ಗೋವಿನಜೋಳದ ಚೀಲಗಳು ಆವಕವಾಗಿದೆ.

ಬಿಟಿ ಹತ್ತಿ (ಉತ್ತಮ) ಕ್ವಿಂಟಲ್‌ಗೆ ₹ 4,700 ದಿಂದ ₹ 5,200 ವರೆಗೆ ಹಾಗೂ ಡಿಸಿಎಚ್‌ ಹತ್ತಿ ₹ 4,900 ರಿಂದ ₹5,300 ವರೆಗೆ ಹಾಗೂ ಬೀಕಲು ಹತ್ತಿ ₹ 1,500 ದಿಂದ ₹  2,500 ತನಕ, ಉತ್ತಮ ಗೋವಿನಜೋಳ ಕ್ವಿಂಟಲ್‌ಗೆ ₹ 1,230 ರಿಂದ ₹ 1,250 ವರೆಗೆ ಹಾಗೂ ಸಾಧಾರಣ ಗೋವಿನ ಜೋಳ ಕ್ವಿಂಟಲ್‌ಗೆ ₹ 1,000 ರಿಂದ ₹ 1,100ರ ವರೆಗೆ ದರವಿತ್ತು’ ಎಂದು ವರ್ತಕ ಜಿ.ಜಿ.ಹೊಟ್ಟಿಗೌಡ್ರ ತಿಳಿಸಿದರು.

‘ಹತ್ತಿ ಅಥವಾ ಗೋವಿನಜೋಳವನ್ನು ಗ್ರೇಡಿಂಗ್‌ ಮಾಡಿ ಮಾರುಕಟ್ಟೆಗೆ ತರಬೇಕು’ ಎಪಿಎಂಸಿ ಸಿಬ್ಬಂದಿ ಎಂ.ವಿ.ಕಮ್ಮಾರ ಮನವಿ ಮಾಡಿದ್ದಾರೆ. ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡುವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂಲ ಉದ್ದೇಶ ಎಂದು ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತೂಕದ ಯಂತ್ರ ಪರಿಶೀಲನೆ: ಮಾರುಕಟ್ಟೆಯ ಅಂಗಡಿ–ಮುಂಗಟ್ಟುಗಳಿಗೆ ಭೇಟಿ ನೀಡಿದ  ಮಾರುಕಟ್ಟೆಯ ತೂಕದ ಸಿಬ್ಬಂದಿ, ಡಿಜಿಟಲ್‌ ತೂಕದ ಯಂತ್ರಗಳನ್ನು (ಕಾಟಾ) ಪರಿಶೀಲಿಸಿದರು.

‘ಕೆಲ ಅಂಗಡಿಗಳ ಡಿಜಿಟಲ್‌ ಯಂತ್ರಗಳಲ್ಲಿ ದೋಷಗಳು ಕಂಡು ಬಂದಿವೆ, ಅವುಗಳನ್ನು ಕೂಡಲೇ ಸರಿಪಡಿಸಿಕೊಳ್ಳುವಂತೆ ನೋಟಿಸ್‌ ನೀಡಲಾಗಿದೆ’ ಎಂದು ಮಾರುಕಟ್ಟೆ ಹಿರಿಯ ಮೇಲ್ವಿಚಾರಕ ಪರಮೇಶ್ವರಪ್ಪ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT