7

ಚೀಮಂಗಲದಲ್ಲಿ ರಾಜ್ಯೋತ್ಸವ; ಸಾಧಕರಿಗೆ ಸನ್ಮಾನ

Published:
Updated:

ಶಿಡ್ಲಘಟ್ಟ: ‘ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸಬಾರದು’ ಎಂದು ನಿವೃತ್ತ ಶಿಕ್ಷಕ ಕಮಲಾಕಾಂತ್ ತಿಳಿಸಿದರು.

ತಾಲ್ಲೂಕಿನ ಚೀಮಂಗಲ ಗ್ರಾಮದ ಬುಧವಾರ ನಡೆದ ಕರ್ನಾಟಕ ‌ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಮಾತೃಭಾಷೆಯಲ್ಲಿ ತಿಳಿಯುವಷ್ಟು, ಕಲಿಯುವಷ್ಟು ಬೇರೆ ಯಾವ ಭಾಷೆಯಲ್ಲೂ ತಿಳಿಯಲು ಸಾಧ್ಯವಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವು ಬೆಳೆಸದೆ ಬೇರೆ ಯಾರು ತಾನೆ ಉಳಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ಸರ್ಕಾರಿ ಪ್ರೌಢಶಾಲೆ, ಕುವೆಂಪು ಶಾಲೆ, ಅಂಗನವಾಡಿ ಮಕ್ಕಳು ಮೆರವಣಿಗೆ ನಡೆಸಿ ಧ್ವಜಾರೋಹಣದಲ್ಲಿ ಪಾಲ್ಗೊಂಡರು. ಮಕ್ಕಳು ಜನಪದ ಗೀತೆಗಳು, ಚಲನಚಿತ್ರದ ಹಾಡುಗಳಿಗೆ ನೃತ್ಯ ಮಾಡಿದರು. ಕೋಲಾಟ, ವಿವಿಧ ವೇಷಭೂಷಣದಲ್ಲಿ ಪ್ರತಿಭೆ ಪ್ರದರ್ಶಿಸಿದರು.

ಕಮಲಾಕಾಂತ್, ಧಾರ್ಮಿಕ ಮುಖಂಡ ಶಂಕರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry