7

ಜೆಡಿಎಸ್‌ನತ್ತ ಮಂಜುನಾಥಗೌಡ?

Published:
Updated:
ಜೆಡಿಎಸ್‌ನತ್ತ ಮಂಜುನಾಥಗೌಡ?

ತೀರ್ಥಹಳ್ಳಿ: ಹಲವು ತಿಂಗಳಿನಿಂದ ಕಾಂಗ್ರೆಸ್‌ ಸಭೆಗಳಿಂದ ದೂರ ಸರಿದಿದ್ದ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷರೂ ಆಗಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಜೆಡಿಎಸ್ ಸೇರುವ ಸಾಧ್ಯತೆ ಇದೆ.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿ,ಸಿ ಶಾಸಕ ಕಿಮ್ಮನೆ ರತ್ನಾಕರ ಅವರ ವಿರುದ್ಧ ಅಲ್ಪ ಮತಗಳಿಂದ ಮಂಜುನಾಥಗೌಡ ಸೋಲು ಕಂಡಿದ್ದರು. ಆಮೇಲೆ ಅವರು ಕಾಂಗ್ರೆಸ್ ಸೇರಿದ್ದರು.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ತಾಲ್ಲೂಕಿನ ಬೇಗುವಳ್ಳಿಯಲ್ಲಿ ನ. 28ರಂದು ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮದನ್ ಅಧ್ಯಕ್ಷತೆಯಲ್ಲಿ ಅವರ ತೋಟದ ಮನೆಯಲ್ಲಿ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಂಜುನಾಥಗೌಡ ಪಾಲ್ಗೊಂಡಿದ್ದರು. ಹೀಗಾಗಿ ಅವರು ಆ ಪಕ್ಷ ಸೇರಬಹುದು ಎನ್ನುವ ಸಾಧ್ಯತೆ ಕಾಣುತ್ತಿದೆ.

2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆರ್‌.ಮದನ್‌, 2018ರಲ್ಲಿ ಮಂಜುನಾಥಗೌಡ ಸ್ಪರ್ಧಿಸಲಿ ಎಂದು ಬಯಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಪಕ್ಷದವರಲ್ಲಿ ಇದೆ. ಡಿ. 2ನೇ ವಾರದ ನಂತರ ಮಂಜುನಾಥಗೌಡ ಹಾಗೂ ಅವರ ಬೆಂಬಲಿಗರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಪಕ್ಷ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry