ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಸಾವಿರ ಪ್ರೋತ್ಸಾಹಧನ

Last Updated 30 ನವೆಂಬರ್ 2017, 9:15 IST
ಅಕ್ಷರ ಗಾತ್ರ

ಮಾಗಡಿ: ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಗ್ರಾಮೀಣ ಬಡಮಕ್ಕಳಿಗೆ ನಿರಂತರವಾಗಿ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ವಿಚಾರ ವೇದಿಕೆ ಗೌರವಾಧ್ಯಕ್ಷ ಎ.ಎಚ್‌.ಬಸವರಾಜು ತಿಳಿಸಿದರು.

ಪಟ್ಟಣದ ವಿದ್ಯಾನಗರದ ಸುಶೀಲ ಬಸವರಾಜು ಈಡಿಗ ಅವರ ಪುತ್ರ ಹರ್ಷಕದಂಬ ಅವರಿಗೆ ₹20 ಸಾವಿರದ ಚೆಕ್‌ ನೀಡಿ ಅವರು ಮಾತನಾಡಿದರು.

ಮಾಗಡಿ ತಾಲ್ಲೂಕಿನ ಪ್ರತಿಭಾವಂತ ಬಡ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತಮ ಅಧಿಕಾರಿಗಳಾಗಬೇಕು ಎಂಬ ಸದುದ್ದೇಶದಿಂದ ವೈಯಕ್ತಿಕ ಸಹಾಯ ಮಾಡುತ್ತಿದ್ದೇವೆ. ಸಹಾಯ ಮಾಡುವುದರಲ್ಲಿ ಸ್ವಾರ್ಥವಿಲ್ಲ. ಬಡವರ ಮಕ್ಕಳು ಉನ್ನತ ದರ್ಜೆಯ ಅಧಿಕಾರಿಗಳಾಗಬೇಕು ಎಂದು ಅವರು ತಿಳಿಸಿದರು.

ಪ್ರಗತಿಪರ ಹೋರಾಟಗಾರರಾದ ಸಿ.ಜಯರಾಮು, ದೊಡ್ಡಿಲಕ್ಷ್ಮಣ್‌, ಬಿ.ಜೆ.ಪಿ. ಮುಖಂಡರಾದ ಮಾರಪ್ಪ, ಶಶಿಧರ್‌, ರಾಘವೇಂದ್ರ, ದಯಾನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT