‘ಜಾನಕಿ ರಾಘವ’ನ ಕಲರವ

7

‘ಜಾನಕಿ ರಾಘವ’ನ ಕಲರವ

Published:
Updated:
‘ಜಾನಕಿ ರಾಘವ’ನ ಕಲರವ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಡಿಸೆಂಬರ್ 4ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ‘ಜಾನಕಿ ರಾಘವ’ ಹೊಸ ಧಾರಾವಾಹಿ ಪ್ರಸಾರವಾಗಲಿದೆ.

ವಿನು ಬಳಂಜ ಈ ಧಾರಾವಾಹಿ ನಿರ್ದೇಶಿಸಿದ್ದಾರೆ. ಗುರುಕಿರಣ್ ಅವರು ಶೀರ್ಷಿಕೆ ಗೀತೆ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಧಾರಾವಾಹಿಯನ್ನು ನಿಖಿಲ್ ಹೋಮ್ ಸ್ಕ್ರೀನ್ ನಿರ್ಮಿಸುತ್ತಿದ್ದು, ಸುಭಾಷ್ ಮತ್ತು ಲಿಂಗೇಗೌಡ ನಿರ್ಮಾಪಕರು. ಜಾನಕಿ ಪಾತ್ರದಲ್ಲಿ ಜೀವಿತಾ ಮತ್ತು ರಾಘವನ ಪಾತ್ರದಲ್ಲಿ ಪವನ್ ನಟಿಸುತ್ತಿದ್ದಾರೆ.

ಏಳು ವರ್ಷದ ಬಳಿಕ ಜಾನಕಿಯ ತಾಯಿ ಪಾತ್ರಕ್ಕಾಗಿ ಕಿರುತೆರೆಗೆ ಹಿರಿಯ ನಟಿ ಪದ್ಮಜಾ ರಾವ್ ವಾಪಸ್‌ ಆಗಿರುವುದು ವಿಶೇಷ. ಹಿರಿಯ ನಟಿ ಸುಂದರಶ್ರೀ, ನಟ ಗುರು ಹೆಗ್ಡೆ, ರವಿ ಭಟ್, ಶರ್ಮಿತಾ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಆ ರಾಮನಿಗೆ ಸೀತೆಯೇ ಜೊತೆ– ಇದು ಜಾನಕಿ ರಾಘವರ ಪ್ರೀತಿಯ ಕಥೆ’ ಎಂಬ ಟ್ಯಾಗ್‌ಲೈನ್ ಹೊತ್ತಿರುವ ಈ ಧಾರಾವಾಹಿ ತಂಡ ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸಲಿದೆ ಎಂದು ವಾಹಿನಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry