7

ಸಂವಿಧಾನದ ಟೀಕೆ ಸಲ್ಲದು

Published:
Updated:

ಮೈಸೂರು: ಸಂವಿಧಾನ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬಗ್ಗೆ ಕೀಳಾಗಿ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಂಥವರಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಕೂಡ ಒಬ್ಬರು ಎಂದು ಮೈಸೂರು ವಿಶ್ವವಿದ್ಯಾನಿಲಯ ದಲಿತ ವಿದ್ಯಾರ್ಥಿ ಒಕ್ಕೂಟ ಟೀಕಿಸಿದೆ.

ಅಸ್ಪೃಶ್ಯತೆ, ಕೋಮುವಾದಿ ತತ್ವಗಳನ್ನು ಆಡಳಿತ ತತ್ವಗಳನ್ನಾಗಿಸಿಕೊಂಡು ಅವರು ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ಸಂವಿಧಾನದ ಕರಡು ಸಮಿತಿ ಸದಸ್ಯರು ವಿವಿಧ ಕಾರಣಗಳಿಂದ ಸಮಿತಿಯಿಂದ ದೂರಾವಾದಾಗಲೂ ಅಂಬೇಡ್ಕರ್ ಅವರು ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

ಆದರೆ, ಪೇಜಾವರ ಸ್ವಾಮೀಜಿ ಹಾಗೂ ಆರ್‌ಎಸ್‌ಎಸ್‌, ಬಿಜೆಪಿ ನಾಯಕರಿಗೆ ಇದು ಅರ್ಥವಾಗಿಲ್ಲ. ಕೀಳಾಗಿ ಹೇಳಿಕೆ ನೀಡುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ಅಜಯ್‌ರಾಜ್‌, ಗೌರವಾಧ್ಯಕ್ಷ ಜೆ.ಶಿವಮೂರ್ತಿ, ಜಗದೀಶ್‌ ಶಂಕರ್‌, ರಂಜಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry