7

ನೀಲಾವರ ಗೋಶಾಲೆಗೆ ಮೇವು

Published:
Updated:

ಹೆಬ್ರಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ನೀಲಾವರದಲ್ಲಿ ನಡೆಯುತ್ತಿರುವ ಗೋಶಾಲೆಗೆ ಹೆಬ್ರಿ ಪರಿಸರದ ಗೋ ಸೇವಕರು, ನಾಗರಿಕರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ತಂಡಗಳ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸಹಕಾರ ಸಹಯೋಗದೊಂದಿಗೆ ಹಸಿಹುಲ್ಲು, ಒಣಹುಲ್ಲು ಮೇವು ಸಂಗ್ರಹಿಸಿ, ಸುಮಾರು 15 ಲಾರಿಗಳಲ್ಲಿ ನೀಲಾವರ ಗೋಶಾಲೆಗೆ ಸಮರ್ಪಿಸುವ ‘ಗೋವಿಗಾಗಿ ಮೇವು’ ಕಾರ್ಯಕ್ರಮ ಭಾನುವಾರ ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬೆಳಿಗ್ಗೆ ಕನ್ಯಾನ ರೈತ ಸೇವಾ ಗ್ರಾಮೋದ್ಯೋಗದ ಗೋಶಾಲೆಯಲ್ಲಿ ಗೋಪೂಜೆ ನಡೆಸಿ, ಹಲವಾರು ದಿನಗಳಿಂದ ಹೆಬ್ರಿ ಸುತ್ತಮುತ್ತಲ ಪ್ರದೇಶದಿಂದ ಸಂಗ್ರಹಿಸಿದ ಮೇವನ್ನು ದೇವಸ್ಥಾನ ವಠಾರದಿಂದ ಲಾರಿಯಲ್ಲಿ ತುಂಬಿಸಲಾಯಿತು. ಬಳಿಕ ಹೆಬ್ರಿ ಪ್ರಮುಖ ಬೀದಿಗಳಲ್ಲಿ ಸಾಗಿ ನೀಲಾವರದ ವರೆಗೆ ಗೋಪ್ರೇಮಿಗಳೊಂದಿಗೆ ಸಾಗಿ ಗೋಶಾಲೆಗೆ ಸಮರ್ಪಿಸಲಾಯಿತು.

ಜಿಲ್ಲಾ ಗೋರಕ್ಷಾ ಪ್ರಮುಖ್ ದಿನೇಶ್ ಶೆಟ್ಟಿ ಹೊಸೂರು, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾಕರ ಹೆಗ್ಡೆ, ತಾರನಾಥ ಬಲ್ಲಾಳ್, ಬಾಲಕೃಷ್ಣ ನಾಯಕ್, ಗುರುಮೂರ್ತಿ ಜೋಯಿಸ್, ನಾಗರಾಜ ಜೋಯಿಸ್, ವಿಕ್ರಮ ನಾಯಕ್, ರಾಮಕೃಷ್ಣ ಆಚಾರ್, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಹರೀಶ್ ಆಚಾರ್ಯ, ಗಿಲ್ಲಾಳಿ ಪದ್ಮನಾಭ ಆಚಾರ್ಯ, ಶ್ರೀಶಾ ಜೋಯಿಸ್, ಟಿ.ಜಿ ಆಚಾರ್ಯ, ನವೀನ್ ಅಡ್ಯಂತಾಯ, ಎಚ್.ಕೆ.ಸುಧಾಕರ, ಜನಾರ್ದನ, ವಿಷ್ಣುಮೂರ್ತಿ ಆಚಾರ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry