7

ಎಟಿಎಂ ಕೇಂದ್ರದಲ್ಲಿ ಸಿಕ್ಕಿದ ಹಣ ವಾರೀಸುದಾರರಿಗೆ ಹಸ್ತಾಂತರ

Published:
Updated:
ಎಟಿಎಂ ಕೇಂದ್ರದಲ್ಲಿ ಸಿಕ್ಕಿದ ಹಣ ವಾರೀಸುದಾರರಿಗೆ ಹಸ್ತಾಂತರ

ಕಾಪು (ಪಡುಬಿದ್ರಿ): ಎಟಿಎಂನಲ್ಲಿ ಹಣ ನಗದೀಕರಿಸಲು ಬಂದಿದ್ದ ವ್ಯಕ್ತಿಯೊಬ್ಬರು ಕಳೆದುಕೊಂಡ ಹಣವನ್ನು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಅವರ ಪುತ್ರ ಮಾನವೀಯತೆ ಮೆರೆದು ಠಾಣೆಯ ಎಸ್ಐ ಅವರಿಗೆ ನೀಡಿದ್ದಾರೆ.

ತಾರನಾಥ್ ವಿ.ಕೋಟ್ಯಾನ್ ಅವರು ಶನಿವಾರ ಸಿಂಡಿಕೇಟ್ ಬ್ಯಾಂಕ್‌ನ ಕಾಪು ಎಟಿಎಂ ಕೇಂದ್ರದಿಂದ ₹ 10 ಸಾವಿರ ನಗದೀಕರಣಕ್ಕೆ ಯತ್ನಿಸಿದ್ದರು. ಆದರೆ, ಹಣ ಕೈಗೆ ಸಿಗದಿದ್ದಾಗ ಅಲ್ಲಿಂದ ಹೊರಟು ಎಸ್‌ಬಿಎಂನ ಎಟಿಎಂ ಕೇಂದ್ರದಿಂದ ₹ 10 ಸಾವಿರ ನಗದೀಕರಿಸಿ ಮನೆಗೆ ತೆರಳಿದ್ದರು. ಮೊದಲು ಡ್ರಾ ಆಗಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ.

ಇದೇ ಎಟಿಎಂಗೆ ಹಣ ನಗದೀಕರಿಸಲು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಲಕ್ಷ್ಮಣ್ ಅವರ ಪುತ್ರ ಕೆ.ಮನೀಷ್ ಕುಮಾರ್ ತೆರಳಿದ್ದರು. ಈ ವೇಳೆ ₹ 10,000 ಅವರಿಗೆ ಸಿಕ್ಕಿತ್ತು. ಅದನ್ನು ಮನೀಷ್ ಕಾಪು ಪಿಎಸ್ಐ ನಿತ್ಯಾನಂದ ಗೌಡ ಅವರ ಬಳಿ ತಂದು ಕೊಟ್ಟಿದ್ದರು. ಹಣ ಕಳೆದು ಕೊಂಡವರ ವಿವರವನ್ನು ಬ್ಯಾಂಕಿಗೆ ಹೋಗಿ ಪಡೆದುಕೊಂಡ ಎಸ್‌ಐ ಅವರು, ತಾರನಾಥ್ ಕೋಟ್ಯಾನ್‌ ಅವರಿಗೆ ಸೋಮವಾರ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry