ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು–ಹಿರಿಯರಿಗೆ ಗೌರವ ಕೊಡಿ: ಬಂಗೇರ

ಕೊಕ್ಕಡ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಮಗಾರಿಗಳ ಉದ್ಘಾಟನೆ
Last Updated 30 ನವೆಂಬರ್ 2017, 11:01 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ವಿದ್ಯಾರ್ಥಿ ದೆಸೆ ಯಲ್ಲಿ ಶಿಕ್ಷಣ ನೀಡಿದ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಕಲಿಸಿದ ಗುರು ಗಳಿಗೆ ಮತ್ತು ಹಿರಿಯರಿಗೆ ಗೌರವ ನೀಡು ವುದನ್ನು ರೂಢಿಸಿಕೊಳ್ಳಬೇಕು ಎಂದು ಎಂದು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೊಕ್ಕಡ ಸರ್ಕಾರಿ ಪ್ರೌಢಶಾಲೆ ಸಹ ಯೋಗದಲ್ಲಿ ಮಂಗಳವಾರ ಕೊಕ್ಕಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ದಿನಾ ಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮನ್ನಣೆಯನ್ನು ನೀಡಿದ್ದು, ದೇಶದಲ್ಲಿಯೇ ಅತ್ಯಂತ ಹೆಚ್ಚು ಉದ್ಯೋ ಗಾವಕಾಶಗಳನ್ನು ನೀಡಿದ ರಾಜ್ಯವಾಗಿ ಸಮೀಕ್ಷೆಯಲ್ಲಿ ಹೆಸರು ಗಳಿಸಿದೆ ಎಂದರು.

ಪ್ರೌಢಶಾಲೆಗೆ ಕೊಕ್ಕಡ ಗ್ರಾಮ ಪಂಚಾಯಿತಿ ವತಿಯಿಂದ ನೀಡಿದ ₹50 ಸಾವಿರ ವೆಚ್ಚದ ಕಾಂಕ್ರೀಟ್‌ ರಸ್ತೆ, ಸ್ಥಳೀಯ ದಾನಿಗಳು ನಿರ್ಮಿಸಿ ಕೊಟ್ಟ ತಾವರೆ ಗಿಡಗಳ ಕೊಳ, ಶುದ್ಧ ಕುಡಿ ಯುವ ನೀರಿನ ಘಟಕ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಈ ಸಂದರ್ಭ ಶಾಸಕರು ಉದ್ಘಾಟಿಸಿದರು.

ಪ್ರೌಢಶಾಲಾ ನಿವೃತ್ತ ಶಿಕ್ಷಕರಾದ ಈಶ್ವರ ಭಟ್, ಮಂಜುನಾಥ, ಹಳೆಯ ವಿದ್ಯಾರ್ಥಿಗಳಾದ ವೇದಮೂರ್ತಿ ಬಾಲ ಕೃಷ್ಣ ಕೆದಿಲಾಯ, ನಿವೃತ್ತ ಭಾರತೀಯ ಸೇನಾ ನೌಕಾಪಡೆ ಅಧಿಕಾರಿ ಬಡೆಕ್ಕರ ಕೃಷ್ಣಸ್ವಾಮಿ ತೋಡಿಲ್ಲಾಯ, ಶಾಸಕ ಕೆ. ವಸಂತ ಬಂಗೇರ, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಜೆ. ಸೆಬಾಸ್ಟಿ ಯನ್ ಅವರುಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ, ಕೊಕ್ಕಡ ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷೆ ರಾಧಾ, ಕೊಕ್ಕಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕ ಟೇಶ್ ಮೂರ್ತಿ, ನೆಲ್ಯಾಡಿ ಸೇಂಟ್‌ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಜಯಪ್ರಕಾಶ ಬಾಳ್ತಿ ಲ್ಲಾಯ, ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಇದ್ದರು.

ಮುಖ್ಯ ಶಿಕ್ಷಕ ದಿನೇಶ್ ಸ್ವಾಗತಿಸಿ ದರು. ಶಿಕ್ಷಕಿ ಪ್ರಫುಲ್ಲಾ ವಂದಿಸಿದರು. ನಿರಂಜನ ಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT